ನ್ಯಾಷನಲ್ ಕ್ರಷ್ ಎಂದೇ ಬಿರುದು ಪಡೆದ್ಕೊಂಡಿರೊ ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರ್ತಾರೆ. ಇನ್ಸ್ಟಗ್ರಾಮ್ ಪೋಸ್ಟ್ ಹಾಗೂ ಸ್ಟೋರಿಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿರುವ ʼಪುಷ್ಪʼ ಸುಂದರಿ ರಶ್ಮಿಕಾ, ಆಕ್ಟರ್ ಆಗುವುದು ಸುಲಭದ ಮಾತಲ್ಲ ಎಂದಿದ್ದಾರೆ.
ʼಪುಷ್ಪʼ ಚಿತ್ರದ ಸಕ್ಸಸ್ ನಲ್ಲಿರುವ ರಶ್ಮಿಕಾ ಇತ್ತೀಚೆಗೆ ಲೇಸರ್ ಟ್ರೀಟ್ಮೆಂಟ್ ಗೆ ಒಳಗಾಗಿದ್ದಾರೆ.
ಇನ್ಸ್ಟಗ್ರಾಮ್ ಸ್ಟೋರಿಯಲ್ಲಿ ಟ್ರೀಟ್ಮೆಂಟ್ ನಂತರ ತಮ್ಮ ಕೆಂಪಗಾಗಿರುವ ಕೈಯನ್ನು ಪೋಸ್ಟ್ ಮಾಡಿರುವ ರಶ್ಮಿಕಾ, ನಿಮಗೆ ಯಾರಿಗಾದರು ಆಕ್ಟರ್ ಆಗುವ ಆಸೆ ಇದ್ದರೆ, ಈ ಇಂಡಸ್ಟ್ರಿಯ ಗ್ಲ್ಯಾಮರ್ ಪಾರ್ಟ್ ಮಾತ್ರವಲ್ಲ ಅದರಿಂದೆ ಇರುವ ನೋವನ್ನು ತಿಳಿದುಕೊಳ್ಳಿ. ಉದಾಹರಣೆಗೆ ಪದೇ ಪದೇ ಲೇಸರ್ ಟ್ರೀಟ್ಮೆಂಟ್ ಗೆ ಒಳಗಾಗಬೇಕು, ಈ ಪ್ರಕ್ರಿಯೆ ಸುಲಭವಲ್ಲ ಎಂದು ಬರೆದುಕೊಂಡಿದ್ದಾರೆ.
ಸದ್ಯ ಸೌತ್ ನ ಟಾಪ್ ನಟಿಯಾಗಿರುವ ರಶ್ಮಿಕಾ, ಬಾಲಿವುಡ್ ನಲ್ಲು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.