alex Certify ಕಾಶ್ಮೀರ: ತೀವ್ರ ಚಳಿಗೆ ಹೆಪ್ಪುಗಟ್ಟಿದ ಜಲಪಾತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಶ್ಮೀರ: ತೀವ್ರ ಚಳಿಗೆ ಹೆಪ್ಪುಗಟ್ಟಿದ ಜಲಪಾತ

ಚಳಿಗಾಲದ ಅತ್ಯಂತ ಶೀತಮಯ ಘಟ್ಟವಾದ ’ಚಿಲ್ಲಾಯ್ ಕಲನ್’ ಆರಂಭಗೊಂಡ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯ ಬಹುತೇಕ ಭಾಗಗಳಲ್ಲಿ ತಾಪಮಾನ ಶೂನ್ಯ ಡಿಗ್ರಿಗಿಂತ ಕೆಳಗೆ ಇಳಿದಿದೆ.

ಶ್ರೀನಗರದಲ್ಲಿ -6 ಡಿಗ್ರಿ ಉಷ್ಣಾಂಶವಿದ್ದರೆ ಗುಲ್ಮಾರ್ಗ್‌‌ನಲ್ಲಿ -9 ಡಿಗ್ರಿಯಷ್ಟು ತಾಪಮಾನವಿತ್ತು. 40 ದಿನಗಳ ಕಾಲದ ಈ ’ಚಿಲ್ಲಾಯ್ ಕಲನ್’ ಡಿಸೆಂಬರ್‌ 21ರಂದು ಆರಂಭಗೊಂಡಿದೆ. ಇದಾದ ಬಳಿಕ 20 ದಿನಗಳ ’ಚಿಲ್ಲಾಯ್ ಖುರ್ದ್’ ಮತ್ತು 10 ದಿನಗಳ ’ಚಿಲ್ಲಾ ಬಚ್ಚಾ’ ಎಂಬ ಹೆಸರಿನ ಘಟ್ಟಗಳ ಚಳಿಗಾಲ ಈ ಪ್ರದೇಶದಲ್ಲಿ ಇರಲಿದೆ.

ಅಮೆರಿಕಾದ ಅಲಾಸ್ಕಾದಲ್ಲಿ ಪ್ರಬಲ ಭೂಕಂಪನ

ಗುಲ್ಮಾರ್ಗ್ ಬಳಿ ಇರುವ ಡ್ರಾಂಗ್ ಜಲಪಾತವು ವಿಪರೀತ ಶೀತದ ವಾತಾವರಣದಿಂದಾಗಿ ಹೆಪ್ಪುಗಟ್ಟಿದೆ. ಚಲನಚಿತ್ರಗಳಲ್ಲಿ ಮಾತ್ರ ಕಾಣುತ್ತಿದ್ದ ಹಿಮಾಚ್ಛಾದಿತ ದೃಶ್ಯಾವಳಿಗಳನ್ನು ನೋಡಲು ನೂರಾರು ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ಚಳಿಗಾಲದ ಮಾಯಾಲೋಕ ಎಂದೂ ಸಹ ಈ ಜಾಗವನ್ನು ಕರೆಯಲಾಗುತ್ತದೆ.

ಚಳಿಯ ತೀವ್ರತೆಗೆ ಕಾಶ್ಮೀರದ ಬಹುತೇಕ ಕೆರೆಗಳು, ನದಿಗಳು ಹಾಗೂ ಇನ್ನಿತರ ಜಲಾಗರಗಳು ಹೆಪ್ಪುಗಟ್ಟಿವೆ. ಜಗತ್ತಿನ ಎರಡನೇ ಅತ್ಯಂತ ಶೀತಮಯ ಪ್ರದೇಶವಾದ ದ್ರಾಸ್‌ನಲ್ಲಿ ಸದ್ಯದ ತಾಪಮಾನ -19.7 ಡಿಗ್ರಿಯಷ್ಟಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...