ಬೆಂಗಳೂರು : ಮಹಿಳೆಗೆ ಮರ್ಮಾಂಗ ತೋರಿಸಿದ್ದ ಆರೋಪದ ಮೇರೆಗೆ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ. ಈ ಘಟನೆ ಭಾನುವಾರ ಯಲಹಂಕದ ನ್ಯೂ ಟೌನ್ ನ ಹೌಸಿಂಗ್ ಬೋರ್ಡ್ ಹತ್ತಿರ ನಡೆದಿದೆ.
ಮಹಿಳೆಯು ರಾತ್ರಿ ಹೊತ್ತು ನಾಯಿಗಳಿಗೆ ಊಟ ಹಾಕಲು ತೆರಳಿದ್ದ ಸಂದರ್ಭದಲ್ಲಿ ಟಾರ್ಚ್ ಹಿಡಿದುಕೊಂಡು ಬಂದ ಪೊಲೀಸ್, ಮರ್ಮಾಂಗ ತೋರಿಸಿದ್ದಾನೆ. ಆಗ ಮಹಿಳೆ ಜೋರಾಗಿ ಚೀರಿದ್ದಾರೆ.
ಕೂಡಲೇ ಸ್ಥಳೀಯರು ಓಡಿ ಬಂದಿದ್ದು, ಪೊಲೀಸನ ಕೃತ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ನಂತರ ಆತ ಬೈಕ್ ಹತ್ತಿ ಹೋಗಿದ್ದು, ಪೊಲೀಸ್ ಕುಡಿದ ಮತ್ತಿನಲ್ಲಿದ್ದರು. ಕೃತ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ ಎಂದು ಮಹಿಳೆ ದೂರು ನೀಡಿದ್ದಾರೆ.
ಈ ಕುರಿತು ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಮೃತ ಹಳ್ಳಿಯ ಹೆಡ್ ಕಾನ್ ಸ್ಟೇಬಲ್ ಚಂದ್ರಶೇಖರ್ ಆರೋಪಿತ ಎನ್ನಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ಅವರು ಚಂದ್ರಶೇಖರ್ ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
https://twitter.com/ForeverIndian07/status/1472870747706204165?ref_src=twsrc%5Etfw%7Ctwcamp%5Etweetembed%7Ctwterm%5E1472870747706204165%7Ctwgr%5E%7Ctwcon%5Es1_&ref_url=https%3A%2F%2Fpublictv.in%2Fbengalore-head-constable-suspended%2F