ಲಕ್ನೋ : ಮಹಿಳೆಯರ ಮದುವೆ ವಯಸ್ಸನ್ನು 18 ರಿಂದ 21ಕ್ಕೆ ಏರಿಸಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮದುವೆ ವಯಸ್ಸನ್ನು ಹೆಚ್ಚಿಸಿದ್ದಕ್ಕೆ ಮಹಿಳೆಯರು ಸಂತಸ ಪಡುತ್ತಿದ್ದಾರೆ. ಅವರ ಕನಸು ಕಟ್ಟಿಕೊಳ್ಳಲು ಈ ಹಕ್ಕು ಅವರಿಗೆ ಸಹಾಯ ಮಾಡುತ್ತದೆ. ಇದು ಹೆಚ್ಚಿನ ಶಿಕ್ಷಣ ಮುಂದುವರೆಸಲು ಅವರಿಗೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಈ ಕಾಯ್ದೆಯನ್ನು ವಿರೋಧಿಸುವವರು ಮಹಿಳೆಯ ಹೆಚ್ಚಿನ ವ್ಯಾಸಂಗವನ್ನು ವಿರೋಧಿಸುವ ಜನರಾಗಿದ್ದಾರೆ. ಇದರಿಂದ ಮಹಿಳೆಯರಿಗೆ ಸಮಾನ ಹಕ್ಕು ಸಿಗುವುದರ ಮೂಲಕ ಹೆಚ್ಚಿನ ಅವಕಾಶಗಳು ತೆರೆದುಕೊಳ್ಳಲಿದ್ದು, ಹೆಚ್ಚಿನ ರಕ್ಷಣೆ ಸಿಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಮದುವೆ ವಯಸ್ಸು ಕಡಿಮೆಯಾಗಿದ್ದರಿಂದಾಗಿ ದೇಶದ ಹೆಣ್ಣು ಮಕ್ಕಳು ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಿದ್ದರು. ಈಗ ಅವರಿಗೆ ಮತ್ತಷ್ಟು ಸ್ವಾತಂತ್ರ ಸಿಕ್ಕಂತಾಗಿದೆ ಎಂದು ಹೇಳಿದ್ದಾರೆ.