ಗಡಿ ನಿಯಂತ್ರಣ ರೇಖೆಯ ಕುಪ್ವಾರಾ ಜಿಲ್ಲೆಯ ಟೀತ್ವಾಲ್ ಎಂಬಲ್ಲಿ ಪಾಕ್ ಸೈನಿಕರು ಅಕ್ರಮವಾಗಿ ಬಂಕರ್ ನಿರ್ಮಿಸುತ್ತಿರುವುದಕ್ಕೆ ಭಾರತ ಖಡಕ್ ಸಂದೇಶ ರವಾನಿಸಿದೆ.
ಈ ಪ್ರದೇಶದಲ್ಲಿ ಪಾಕಿಸ್ತಾನ ತನ್ನ ಗಡಿಯಿಂದ 500 ಮೀಟರ್ ಮುಂದೆ ಬಂದು ಬಂಕರ್ ನಿರ್ಮಿಸಿದೆ. ಭಾರತೀಯ ಸೇನೆ ಇದನ್ನು ವಿರೋಧಿಸಿದೆ. ಅಕ್ರಮ ಬಂಕರ್ ನಿರ್ಮಾಣ ತೆರವುಗೊಳಿಸುವಂತೆ ಕೂಡ ಸೂಚಿಸಲಾಗಿದೆ ಎಂದು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ.
ಭಾರತ ಎಚ್ಚೆತ್ತುಕೊಳ್ಳುತ್ತಿದ್ದಂತೆ ಪಾಕ್ ಬಂಕರ್ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿದೆ ಎನ್ನಲಾಗಿದೆ. ಅಲ್ಲದೇ, ಪಾಕ್ ಸೈನಿಕರ ಉದ್ಧಟತನವನ್ನು ಎದುರಿಸಲು ಭಾರತೀಯ ಸೈನಿಕರಿಗೆ ಸ್ವತಂತ್ರ ನೀಡಲಾಗಿದೆ.