alex Certify ಇನ್ಮುಂದೆ ಶಾದಿ ಡಾಟ್ ಕಾಮ್‍ನಲ್ಲಿ ಸಲಿಂಗಿಗಳಿಗೂ ಬಾಳಸಂಗಾತಿ ಹುಡುಕಲು ಅವಕಾಶ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ಮುಂದೆ ಶಾದಿ ಡಾಟ್ ಕಾಮ್‍ನಲ್ಲಿ ಸಲಿಂಗಿಗಳಿಗೂ ಬಾಳಸಂಗಾತಿ ಹುಡುಕಲು ಅವಕಾಶ..!

ಮನೆಯಲ್ಲಿ ನಿಶ್ಚಯಿಸಿದ ಹುಡುಗ/ಹುಡುಗಿಯನ್ನು ಕುಟುಂಬಸ್ಥರ ಸಮ್ಮುಖದಲ್ಲಿ ಒಪ್ಪಿ ಮದುವೆಯಾಗುತ್ತಿದ್ದ ಕಾಲ ಹೋಗಿದೆ. ಈಗೇನಿದ್ರೂ ಲವ್ ಮ್ಯಾರೇಜ್ ಅಥವಾ ಬಾಳ ಸಂಗಾತಿಯ ಆಯ್ಕೆಯನ್ನು ಕೂಡ ಆನ್ಲೈನ್ ನಲ್ಲೇ ಮಾಡಲಾಗುತ್ತದೆ. ಇದರಿಂದ ಸಮಯದ ಉಳಿತಾಯವೂ ಆಗುತ್ತದೆ, ಸುಲಭವೂ ಹೌದು. ಇದಕ್ಕಾಗಿ ಆನ್ಲೈನ್ ನಲ್ಲಿ ಹಲವಾರು ಮ್ಯಾಟ್ರಿಮೋನಿಯಲ್ ಸೈಟ್ ಗಳು ತಲೆಯೆತ್ತಿವೆ. ಇವುಗಳಲ್ಲಿ ಶಾದಿ ಡಾಟ್ ಕಾಮ್ ಕೂಡ ಒಂದು.

ಇದೀಗ ಶಾದಿ ಡಾಟ್ ಕಾಮ್ ಒಂದು ಹೆಜ್ಜೆ ಮುಂದೆ ಹೋಗಿದ್ದು, ಇನ್ಮುಂದೆ ಸಲಿಂಗ ಕಾಮಿಗಳು ಕೂಡ ತಮ್ಮ ಬಾಳಸಂಗಾತಿಯನ್ನು ಶಾದಿ ಡಾಟ್ ಕಾಮ್ ನಲ್ಲಿ ಆಯ್ಕೆ ಮಾಡಬಹುದಾಗಿದೆ. ಬಾಳ ಸಂಗಾತಿಗಳಿಗೆಂದೇ ಇರುವ ಈ ವೆಬ್ ಸೈಟ್, ಯಾವುದೇ ಪ್ರದೇಶ, ಸಮುದಾಯ, ಯಾವುದೇ ಧರ್ಮ ಅಥವಾ ಯಾವುದೇ ಲಿಂಗಿಗಳು ಇಲ್ಲಿ ನೋಂದಾವಣಿ ಮಾಡಲು ಅವಕಾಶವಿದೆ. ಹೀಗಾಗಿ ತಮ್ಮ ಸೇವೆ ವಿಸ್ತರಿಸಲು ಮುಂದಾಗಿದ್ದಾಗಿ ಶಾದಿ ಡಾಟ್ ಕಾಮ್ ಸಿಇಒ ಅನುಪಮ್ ಮಿತ್ತಲ್ ಹೇಳಿದ್ದಾರೆ.

ಇನ್ನು ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಕೆಲವು ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ರೆ, ಇನ್ನೂ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಕೂಡ, ಇಂತಹ ಮದುವೆಗಳಿಗೆ ಭಾರತದಲ್ಲಿ ಇನ್ನೂ ಮನ್ನಣೆ ಸಿಗಬೇಕಾಗಿದೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗಷ್ಟೇ ತೆಲಂಗಾಣದಲ್ಲಿ ಸಲಿಂಗಕಾಮಿ ಪುರುಷರಿಬ್ಬರು ಪತಿ-ಪತಿಗಳಾಗಿದ್ದಾರೆ. ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.

https://twitter.com/udhan_khatola/status/1472184299143286785?ref_src=twsrc%5Etfw%7Ctwcamp%5Etweetembed%7Ctwterm%5E1472184299143286785%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fshaadi-com-matchmaking-for-lgbtq-hit-or-miss-desi-twitter-weighs-in-4572806.html

https://twitter.com/GOLDEVING/status/1472277598189195264?ref_src=twsrc%5Etfw%7Ctwcamp%5Etweetembed%7Ctwterm%5E1472277598189195264%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fshaadi-com-matchmaking-for-lgbtq-hit-or-miss-desi-twitter-weighs-in-4572806.html

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...