ಮೈಸೂರು: ಎಂಇಎಸ್ ಪುಂಡಾಟದ ವಿರುದ್ಧ ಧ್ವನಿ ಎತ್ತದ ರಾಜ್ಯದ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್, ಸಂಸದರನ್ನು ಹರಾಜು ಹಾಕುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, ಎಂಇಎಸ್ ಕಾರ್ಯಕರ್ತರು ರಾಜ್ಯದಲ್ಲಿ ದಾಂಧಲೆ ನಡೆಸಿ, ಪುಂಡಾಟ ಮೆರೆಯುತ್ತಿದ್ದರೂ ಕರ್ನಾಟಕದ ಲೋಕಸಭಾ ಸದಸ್ಯರು ಈ ಬಗ್ಗೆ ಮಾತನಾಡುತ್ತಿಲ್ಲ. ಹಾಗಾಗಿ ಸಂಸದರನ್ನು ಹರಾಜು ಹಾಕುತ್ತಿದ್ದೇವೆ. ಕರ್ನಾಟಕದ ಸಂಸದರ ಭಾವಚಿತ್ರಗಳನ್ನಿಟ್ಟು ಹರಾಜು ಪ್ರಕ್ರಿಯೆ ನಡೆದಿದೆ. ಕೇವಲ 1 ರೂಪಾಯಿಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹರಾಜಾಗಿದ್ದಾರೆ. ಆದರೆ ಉಳಿದ ಸಂಸದರನ್ನು ಯಾರೂ ಖರೀದಿಸಿಲ್ಲ. ಹಾಗಾಗಿ ಉಳಿದ ಸಂಸದರಿಗೆ ಒಂದು ರೂಪಾಯಿ ಕೂಡ ಬೆಲೆಯಿಲ್ಲ ಎಂದು ವಾಗ್ದಾಳಿ ನಡೆಸಿದರು.
ಅಮವಾಸ್ಯೆಯಂದು ಈ ವಸ್ತುಗಳನ್ನು ಖರೀದಿಸಬೇಡಿ
ಕರ್ನಾಟಕದಲ್ಲಿ ಎಂಇಎಸ್ ಕಿಡಿಗೇಡಿತನ ಹೆಚ್ಚುತ್ತಿದ್ದರೂ ರಾಜ್ಯದ ಜನಪ್ರತಿನಿಧಿಗಳು ಎಂಇಎಸ್ ನಿಷೇಧಕ್ಕೆ ಮೀನಾಮೇಷ ಎಣಿಸುತ್ತಿದ್ದಾರೆ. ಶಾಸನ ಸಭೆಯಲ್ಲಿ ಮನ್ನಣೆ ಇಲ್ಲದ ಮಾತನಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.