
ಸಂಸತ್ತಿನ ಚಳಿಗಾಲದ ಅಧಿವೇಶನದ ಸೋಮವಾರದ ದಿನದಂದು ರಾಜ್ಯಸಭೆಯಲ್ಲಿ ವಾದ-ವಾಗ್ವಾದಗಳಿಗೆ ಬರವಿರಲಿಲ್ಲ. ಸಮಾಜವಾದಿ ಪಾರ್ಟಿ ಸಂಸದೆ ಜಯಾ ಬಚ್ಚನ್ ಬಿಜೆಪಿ ಸಂಸದರ ವಿರುದ್ಧ ವಾಕ್ಸಮರದಲ್ಲಿ ಭಾಗಿಯಾಗಿದ್ದರು.
ಸದನದಲ್ಲಿ ವಿಪರೀತ ಗದ್ದಲದ ಕಾರಣ ಸಭೆಯನ್ನು ಸಂಜೆ 5 ಗಂಟೆವರೆಗೂ ಮುಂದೂಡಲಾಗಿತ್ತು. ಒಂದು ಹಂತದಲ್ಲಿ ಖಜಾನೆ ಪೀಠಗಳ ಮೇಲೆ ಗರಂ ಆದ ಜಯಾ ಬಚ್ಚನ್, “ನಿಮ್ಮ ಪಾಲಿನ ಕೆಟ್ಟ ದಿನಗಳು ಬರಲಿವೆ,” ಎಂದಿದ್ದಾರೆ.
ಒಲೆ ಹಚ್ಚದೇ ಅವಲಕ್ಕಿ ತಯಾರಿಸಿದ್ರಾ ಕಮೀಷನರ್..?
ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ವಸ್ತುಗಳು (ತಿದ್ದುಪಡಿ) ಮಸೂದೆ, 2021ರ ಮೇಲೆ ಚರ್ಚೆಯಲ್ಲಿ ಭಾಗಿಯಾಗಲು ಜಯಾ ಬಚ್ಚನ್ರನ್ನು ಕೋರಲಾಯಿತು. ಇದೇ ವೇಳೆ ಸಭಾಪತಿಗಳು ಸದನದಲ್ಲಿ ಯಾವುದೇ ಪಕ್ಷದ ಪರವಾಗಿ ಇರದೇ ನ್ಯಾಯಸಮ್ಮತವಾಗಿ ಇರಬೇಕೆಂದು ಜಯಾ ಆಗ್ರಹಿಸಿದ್ದಾರೆ.
ಸಭಾಪತಿಗಳು ವಿರೋಧ ಪಕ್ಷಗಳತ್ತ ಕಿವಿಗೊಡುತ್ತಿಲ್ಲ ಎಂದು ತಮ್ಮ ಮಾತು ಆರಂಭಿಸಿದ ಜಯಾ, “ನಿಮ್ಮಿಂದ ನಾವು ನಿರೀಕ್ಷೆ ಮಾಡಬಹುದೇ? ಏನಾಗುತ್ತಿದೆ? ಮಾಡಲು ಏನೆಲ್ಲಾ ಕೆಲಸಗಳಿವೆ ಮತ್ತು ನಾವು ಸರ್ಕಾರವು ತನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ತಂದಿರುವ ಮಸೂದೆಯೊಂದರ ಬಗ್ಗೆ ಮಾತನಾಡುತ್ತಿದ್ದೇವೆ. ನೀವು ನಮ್ಮ ಕುತ್ತಿಗೆ ಹಿಸುಕಿದ್ದೀರಿ. ನೀವು ನ್ಯಾಯಸಮ್ಮತವಾಗಿದ್ದು ಯಾವುದೇ ಪಕ್ಷವನ್ನು ಬೆಂಬಲಿಸಬಾರದು,” ಎಂದಿದ್ದಾರೆ.