ನವದೆಹಲಿ : ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವಂತೆ ಭಗವದ್ಗೀತೆಯನ್ನು ರಾಜ್ಯ ಪಠ್ಯಕ್ರಮದಲ್ಲಿಯೂ ಅಳವಡಿಸಬಹುದು. ಇದಕ್ಕೆ ರಾಜ್ಯ ಸರ್ಕಾರಗಳೇ ನಿರ್ಣಯ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಹೇಳಿದೆ.
ಈಗಾಗಲೇ ಸಿಬಿಎಸ್ಇ 6, 7 ಹಾಗೂ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಹಲವು ಅಧ್ಯಾಯಗಳನ್ನು ಕಲಿಸಲಾಗುತ್ತಿದೆ. ಹೀಗಾಗಿ ಭಗವದ್ಗೀತೆ ಕಲಿಸಲು ರಾಜ್ಯ ಸರ್ಕಾರಗಳು ಬಯಸಿದರೆ ಭಗವದ್ಗೀತೆ ಹಾಗೂ ಬೋಜ್ ಪುರಿ ಭಾಷೆಯನ್ನು ಪಠ್ಯಕ್ರಮದಲ್ಲಿ ಸೇರಿಸಬಹುದು ಎಂದು ರಾಜ್ಯ ಶಿಕ್ಷಣ ಖಾತೆ ಸಚಿವೆ ಅನ್ನಪೂರ್ಣಾದೇವಿ ಹೇಳಿದ್ದಾರೆ.
ಬಾಹ್ಯಾಕಾಶ ನಿಲ್ದಾಣದಲ್ಲಿ 12 ದಿನ ಕಳೆದು ಭೂಮಿಗೆ ಮರಳಿದ ಬಿಲಿಯನೇರ್..!
ಪ್ರಶ್ನೋತ್ತರ ಸಂದರ್ಭದಲ್ಲಿ ಗೋಪಾಲ್ ಶೆಟ್ಟಿ ಅವರು, ಭಗವದ್ಗೀತೆ ಕಲಿಸಲು ಕೇಂದ್ರ ಸರ್ಕಾರವು ನಿಬಂಧನೆಗಳನ್ನು ತರುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿವಿಧ ತರಗತಿಗಳಲ್ಲಿ ರಾಜ್ಯ ಸರ್ಕಾರಗಳು ಭಗವದ್ಗೀತೆ ಕುರಿತು ಕಲಿಸಲು ಮುಂದಾಗಬಹುದು. ಇದಕ್ಕೆ ಕೇಂದ್ರದ ಅನುಮತಿ ಇದೆ ಎಂದು ಹೇಳಿದ್ದಾರೆ.