alex Certify ಪಿ.ಎಂ. ಕಿಸಾನ್ ಯೋಜನೆಯಡಿ ನೋಂದಾಯಿಸಿದ ರೈತರಿಗೆ ಮುಖ್ಯ ಮಾಹಿತಿ: ಇ-ಕೆವೈಸಿ ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿ.ಎಂ. ಕಿಸಾನ್ ಯೋಜನೆಯಡಿ ನೋಂದಾಯಿಸಿದ ರೈತರಿಗೆ ಮುಖ್ಯ ಮಾಹಿತಿ: ಇ-ಕೆವೈಸಿ ಕಡ್ಡಾಯ

ಧಾರವಾಡ: ಪಿ.ಎಂ.ಕಿಸಾನ್ ಯೋಜನೆಯಡಿ ನೋಂದಾಯಿಸಿದ ಎಲ್ಲ ಅರ್ಹ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಲು ಸೂಚಿಸಿದೆ.

ಇ-ಕೆವೈಸಿ ಮಾಡಿಕೊಳ್ಳಲು ಫಲಾನುಭವಿಗಳು https://pmkisan.gov.in ವೆಬ್‍ಸೈಟ್ ಮುಖಾಂತರ ಅಥವಾ ಪಿ.ಎಂ.ಕಿಸಾನ್ ಮೊಬೈಲ್ ಆ್ಯಪ್ ಮುಖಾಂತರ ಫಲಾನುಭವಿಗಳು ತಾವೇ ಮಾಡಿಕೊಳ್ಳಬಹುದಾಗಿದೆ.

 ಇ-ಕೆವೈಸಿ ಮಾಡಿಕೊಳ್ಳುವ ವಿಧಾನ:

ಇ-ಕೆವೈಸಿ ಓಟಿಪಿ ಮುಖಾಂತರ ಆಧಾರ್ ಸಂಖ್ಯೆಯೊಂದಿಗೆ ಮೊಬೈಲ್ ನಂಬರ್ ಜೋಡಣೆಯಾದ ಫಲಾನುಭವಿಗಳು https://pmkisan.gov.in ವೆಬ್‍ಸೈಟ್‍ನಲ್ಲಿ ಇ-ಕೆವೈಸಿ ಲಿಂಕ್ ಮೇಲೆ ಕ್ಲಿಕ್ಕಿಸಿ ಆಧಾರ್ ನಂಬರ್ ಹಾಗೂ ಕ್ಯಾಪ್‍ಚಾ ನಮೂದಿಸಿ ತದನಂತರ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ದಾಖಲಿಸಿ ಉಚಿತವಾಗಿ ಇ-ಕೆವೈಸಿ ಮಾಡಿಕೊಳ್ಳಬಹುದಾಗಿದೆ.

ಇ-ಕೆವೈಸಿ ಬಯೋಮೆಟ್ರಿಕ್ ಮೂಲಕ ಆಧಾರ್ ಸಂಖ್ಯೆಯೊಂದಿಗೆ ಮೊಬೈಲ್ ನಂಬರ್ ಜೋಡಣೆಯಾಗದ ರೈತರು ಅಥವಾ ಓಟಿಪಿ ಸೃಜನೆಯಾಗದ ರೈತರು ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ ನಮೂದಿಸಿ ಬಯೋಮೆಟ್ರಿಕ್ ಉಪಕರಣದಲ್ಲಿ ಬೆರಳು ನಮೂದಿಸಿ ಇ-ಕೆವೈಸಿ ಮಾಡಿಕೊಳ್ಳಬಹುದಾಗಿದೆ. ಈ ಪ್ರಕ್ರಿಯೆಗಾಗಿ ಸಿಎಸ್‍ಸಿ ಕೇಂದ್ರದವರು ಎಲ್ಲ ಟ್ಯಾಕ್ಸ ಒಳಗೊಂಡಂತೆ, 15 ರೂ. ಮಾತ್ರ ಪ್ರತಿ ಫಲಾನುಭವಿಯಿಂದ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ರೈತ ಬಾಂಧವರು ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರನ್ನು ಭೇಟಿ ನೀಡಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...