ಶ್ವಾನಗಳೆಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..? ಪ್ರಪಂಚದಾದ್ಯಂತ ಬಹುತೇಕ ಮಂದಿ ನಾಯಿಗಳನ್ನು ಇಷ್ಟಪಡುತ್ತಾರೆ. ಅವುಗಳು ಕೂಡ ತನ್ನ ಮಾಲೀಕರ ಬಗ್ಗೆ ಸ್ವಾಮಿ ನಿಷ್ಠೆಯನ್ನು ಹೊಂದಿರುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಂತೂ ಮುದ್ದಾದ ನಾಯಿಗಳ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿದ್ರೆ ನಿಮಗೂ ನಗು ಬರಬಹುದು.
ವಿದೇಶದಲ್ಲಿ ನಡೆದಿರುವ ಘಟನೆ ಇದಾಗಿದ್ದು, ಮದುವೆಯ ವೇದಿಕೆಗೆ ನಾಯಿ ಎಂಟ್ರಿ ಕೊಟ್ಟು ಎಲ್ಲರ ಮುಖದಲ್ಲೂ ನಗೆ ತರಿಸಿದೆ. ವರ ಕಪ್ಪು ಬಣ್ಣದ ಸೂಟ್-ಬೂಟ್ ತೊಟ್ಟಿದ್ದರೆ, ವಧು ಸಾಂಪ್ರದಾಯಿಕ ಬಿಳಿ ಬಣ್ಣದ ಗೌನ್ ತೊಟ್ಟು ವೇದಿಕೆಯ ಮೇಲೆ ನಿಂತಿದ್ದರು. ಈ ವೇಳೆ ನೂತನ ಜೋಡಿ ನೃತ್ಯ ಮಾಡಲು ತೊಡಗಿದಾಗ ಅಲ್ಲಿಗೆ ಬಂದ ನಾಯಿ ಅಡ್ಡಿಯನ್ನುಂಟು ಮಾಡಿದೆ.
ನವಜೋಡಿ ಕೈಕೈ ಹಿಡಿದು ನೃತ್ಯದಲ್ಲಿ ಭಾಗವಹಿಸುತ್ತಿದ್ದ ವೇಳೆ ಅಡ್ಡ ಬಂದ ನಾಯಿ ಅವರಿಬ್ಬರ ಮಧ್ಯೆ ಹಾದು ಹೋಗಿದೆ. ಆಕಸ್ಮಿಕವಾಗಿ ನಡೆದ ಈ ಘಟನೆಯನ್ನು ನೋಡಿದ ನೆರೆದಿದ್ದ ಅತಿಥಿಗಳು ಗೊಳ್ಳನೆ ನಕ್ಕಿದ್ದಾರೆ.
ಈ ಮುದ್ದಾದ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ 4000 ಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.
https://www.youtube.com/watch?v=7_ybSezk4CA