ಬೆಳಗಾವಿ: ತೀವ್ರ ವಿರೋಧದ ನಡುವೆಯೂ ಮತಾಂತರ ನಿಷೇಧ ಕಾಯ್ದೆ ಮಂಡನೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಮ್ಮತಿ ದೊರೆತಿದ್ದು, ನಾಳೆಯೇ ಮಸೂದೆ ಮಂಡನೆ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ.
ಬೆಳಗಾವಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಮಸೂದೆ ಮಂಡನೆಗೆ ಒಪ್ಪಿಗೆ ದೊರೆತಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ನಾಳೆ ಅಧಿವೇಶನದಲ್ಲಿ ಮಸೂದೆ ಮಂಡಿಸಲು ತೀರ್ಮಾನಿಸಲಾಗಿದೆ.
BIG NEWS: MES ಬಗ್ಗೆ ವಿಪಕ್ಷ ನಾಯಕರ ಕಠಿಣ ನಿಲುವು; ಕೆಪಿಸಿಸಿ ಅಧ್ಯಕ್ಷರ ಮೃದು ಧೋರಣೆ; ಗೊಂದಲದ ಗೂಡಾದ ಕಾಂಗ್ರೆಸ್; ಕಿಡಿ ಕಾರಿದ BJP
ಮತಾಂತರಕ್ಕೆ ಜಿಲ್ಲಾಧಿಕಾರಿಗಳಿಗೆ ವಿಶೇಷ ಅರ್ಜಿ ಸಲ್ಲಿಸಬೇಕು. ಉದ್ಯೋಗ ಹಾಗೂ ಆದಾಯದ ಬಗ್ಗೆ ಮಾಹಿತಿ ನೀಡಬೇಕು, ಮತಾಂತರದ ಮೊದಲಿಗೂ, ನಂತರದ ಹೆಸರು, ತಂದೆ-ತಾಯಿ ಬಗ್ಗೆ ಮಾಹಿತಿ, ಸಂಪೂರ್ಣ ವಿಳಾಸ ಸೇರಿದಂತೆ ಕೆಲ ತಿದ್ದುಪಡಿಗಳ ಜೊತೆಗೆ ಮಸೂದೆ ಮಂಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.