ಕೋವಿಡ್-19ನ ಒಮಿಕ್ರಾನ್ ಅವತಾರಿ ಜಗತ್ತಿನಾದ್ಯಂತ ಭೀತಿಯ ಅಲೆ ಹುಟ್ಟಿಸಿಕೊಂಡು ಹೋಗುತ್ತಿದೆ ಎಂದು ಶ್ವೇತಭವನದ ಆರೋಗ್ಯ ಸಲಹಾಧಿಕಾರಿ ಡಾ ಆಂಟೋನಿ ಫೌಸಿ ತಿಳಿಸಿದ್ದಾರೆ.
“ಈ ಸೋಂಕಿನ ಬಗ್ಗೆ ಒಂದು ವಿಚಾರ ಸ್ಪಷ್ಟವಾಗಿರುವುದೇನೆಂದರೆ, ವ್ಯಾಪಕವಾಗಿ ಪಸರಲು ಇದಕ್ಕಿರುವ ಅಸಾಧಾರಣ ಸಾಮರ್ಥ್ಯ. ಇದು ನಿಜಕ್ಕೂ ಜಗತ್ತಿನಾದ್ಯಂತ ಹಬ್ಬುತ್ತಿದೆ,” ಎಂದು ಫೌಸಿ ತಿಳಿಸಿದ್ದಾರೆ.
ಅಧ್ಯಕ್ಷ ಜೋ ಬಿಡೆನ್ ಅವರು ಈ ಚಳಿಗಾಲದಲ್ಲಿ ಒಮಿಕ್ರಾನ್ನಿಂದ ಏನೆಲ್ಲಾ ಆಗಬಹುದು ಎಂಬ ಕುರಿತು ಎಚ್ಚರಿಕೆ ನೀಡಲಿದ್ದಾರೆ ಎಂದು ತಿಳಿಸಿದ ಫೌಸಿ, “ನಮ್ಮಲ್ಲಿ ಲಸಿಕೆ ಪಡೆಯಲು ಅರ್ಹರಾದ ಬಹಳಷ್ಟು ಮಂದಿ ಇದ್ದರೂ ಸಹ ಇನ್ನೂ ಲಸಿಕೆ ನೀಡದೇ ಇರುವುದೇ ನಿಜವಾದ ಸಮಸ್ಯೆಯಾಗಿದೆ,” ಎಂದಿದ್ದಾರೆ.
BIG NEWS: ಕನ್ನಡ ಪರ ಸಂಘಟನೆ ಕಾರ್ಯಕರ್ತರು ಪೊಲೀಸರ ವಶಕ್ಕೆ; ಕರ್ನಾಟಕವೇ ಬಂದ್ ಆಗುತ್ತೆ ಹುಷಾರ್…! ಎಚ್ಚರಿಕೆ ನೀಡಿದ ಪ್ರವೀಣ್ ಶಟ್ಟಿ
ರಾಷ್ಟ್ರೀಯ ಅಲರ್ಜಿ ಮತ್ತು ಸೋಂಕಿನ ರೋಗಗಳ ಸಂಸ್ಥೆಯ ನಿರ್ದೇಶಕರೂ ಆದ ಫೌಸಿ, “ಒಂದಷ್ಟು ಕಾಲದ ಬಳಿಕವಾದರೂ ಸೋಂಕಿನಿಂದ ಮುಕ್ತರಾಗುವ ಆಲೋಚನೆ ಚೆನ್ನಾಗಿದೆ. ಆದರೆ ಸದ್ಯದ ಮಟ್ಟಿಗೆ ನಮಗೆ ಗೊತ್ತಿರುವುದೇನೆಂದರೆ, ಬಹುತೇಕ ಎರಡು ವರ್ಷಗಳ ಅನುಭವದ ಬಳಿಕ ವೈರಸ್ ನಿಜಕ್ಕೂ ಏನೆಂದು ಹೇಳಲು ಬರುವುದೇ ಇಲ್ಲ,” ಎಂದಿದ್ದಾರೆ.
ಒಮಿಕ್ರಾನ್ ಕಾರಣದಿಂದ ದೊಡ್ಡ ಮಟ್ಟದಲ್ಲಿ ಜನರು ಆಸ್ಪತ್ರೆ ಸೇರಬಹುದಾದ ಸಾಧ್ಯತೆ ಇರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಬೂಸ್ಟರ್ ಡೋಸ್ಗಳನ್ನು ಪಡೆಯಲು ಆಗ್ರಹಿಸಿದ್ದಾರೆ.