ದೆಹಲಿಯ ರೋಹಿಣಿ ಜಿಲ್ಲಾ ಕೋರ್ಟ್ ಸಮುಚ್ಛಯದಲ್ಲಿ ಸ್ಫೋಟಕಗಳನ್ನು ಇಡಲು ಯತ್ನಿಸಿದ್ದ ಆರೋಪದ ಮೇಲೆ ಪೊಲೀಸ್ ಕಸ್ಟಡಿಯಲ್ಲಿರುವ ಡಿಆರ್ಡಿಓ ವಿಜ್ಞಾನಿಯೊಬ್ಬರು ವಾಶ್ರೂಂ ಒಂದರಲ್ಲಿದ್ದ ಹ್ಯಾಂಡ್ವಾಶ್ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಭರತ್ ಭೂಷಣ್ ಕಟಾರಿಯಾ (47) ಸದ್ಯ ಏಮ್ಸ್ನಲ್ಲಿ ಚಿಕಿತ್ಸೆಗೆ ಒಳಗಾಗಿದ್ದು, ಆತನ ಪರಿಸ್ಥಿತಿ ಸ್ಥಿರವಾಗಿದೆ.
ಬೆಂಗಳೂರಿನಿಂದ ಈ ಫ್ಲೈಟ್ ಏರುವವರಿಗೆ ಸಿಗುತ್ತೆ ಉಚಿತ ಸೀಟ್ ಆಯ್ಕೆ ಮತ್ತು ಊಟ
ಟಿಫಿನ್ ಬಾಕ್ಸ್ ಒಳಗೆ ಸುಧಾರಿತ ಸ್ಪೋಟಕ ವಸ್ತು (ಐಇಡಿ) ಇಟ್ಟು ರೋಹಿಣಿ ಕೋರ್ಟ್ ಒಳಗೆ ಡಿಸೆಂಬರ್ 9ರಂದು ತಂದಿಡಲು ಬಂದಿದ್ದ ವೇಳೆ ಆರೋಪಿಯನ್ನು ಬಂಧಿಸಲಾಗಿದೆ. ತನ್ನ ವಿರುದ್ಧ ಅನೇಕ ಪ್ರಕರಣಗಳನ್ನು ದಾಖಲಿಸಿದ್ದ ಪಕ್ಕದ ಮನೆಯಾತನನ್ನು ಕೊಲ್ಲುವ ಉದ್ದೇಶದಿಂದ ಕಟಾರಿಯಾ ಹೀಗೆ ಮಾಡಿದ್ದರು ಎನ್ನಲಾಗಿದೆ. ದೆಹಲಿ ಪೊಲೀಸ್ ವಿಶೇಷ ಘಟಕದ ಸಿಬ್ಬಂದಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಶನಿವಾರ ರಾತ್ರಿ, ವಾಶ್ರೂಂನಲ್ಲಿ ಸಿಕ್ಕ ಹ್ಯಾಂಡ್ವಾಶ್ ಸೇವಿಸಿದ ಕಟಾರಿಯಾ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿ ಸಿಕ್ಕಿದ್ದಾರೆ. ಏನೆಂದು ಕೇಳಿದಾಗ ತನಗೆ ವಾಂತಿ ಮತ್ತು ಹೊಟ್ಟೆ ನೋವಿದೆ ಎಂದಿದ್ದಾರೆ ಕಟಾರಿಯಾ. ಕೂಡಲೇ ಆತನನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ಕೊಂಡೊಯ್ದಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಏಮ್ಸ್ಗೆ ಕರೆದುಕೊಂಡು ಬರಲಾಗಿದೆ.
ಕೋಡ್ ರೂಂ ಸಂಖ್ಯೆ 102ರಲ್ಲಿ ಕಟಾರಿಯಾ ಇಟ್ಟಿದ್ದ ಐಇಡಿ ಸ್ಫೋಟಗೊಂಡಿದ್ದು, ಮುಖ್ಯ ಪೇದೆ ರಾಜೀವ್ ಗಾಯಗೊಂಡಿದ್ದಾರೆ.