ನವದೆಹಲಿ: ಮಹಿಳಾ ಪ್ರಯಾಣಿಕರಿಗೆ ವಿಶೇಷ ಸೌಲಭ್ಯ ಕಲ್ಪಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಸುರಕ್ಷತೆ ಜೊತೆಗೆ ಮತ್ತು ದೂರದ ಪ್ರಯಾಣದ ರೈಲುಗಳಲ್ಲಿ ಮಹಿಳೆಯರಿಗೆ ಸೀಟು ಕಾದಿರಿಸಲು ಇಲಾಖೆ ನಿರ್ಧರಿಸಿದೆ.
ವಿಶೇಷ ಸೀಟು ಕಾಯ್ದಿರಿಸುವ ಜೊತೆಗೆ ಇತರೆ ಸೌಲಭ್ಯ ಕಲ್ಪಿಸಲಾಗುತ್ತದೆ. ರಾಜಧಾನಿ ಎಕ್ಸ್ ಪ್ರೆಸ್, ಗರೀಬ್ ರಥ್, ಸಂಪೂರ್ಣ ಎಸಿ ರೈಲುಗಳ ಸ್ಲೀಪರ್ ಕ್ಲಾಸ್ ನಲ್ಲಿ 6 ಸೀಟುಗಳನ್ನು ಕಾಯ್ದಿರಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಮಹಿಳಾ ಪ್ರಯಾಣಿಕರಿಗೆ ಮೀಸಲಾದ ಸೀಟುಗಳನ್ನು ವಯಸ್ಸು ಇತರೆ ಅಂಶಗಳನ್ನು ಪರಿಗಣಿಸದೇ ನೀಡಲಾಗುತ್ತದೆ. ಮಹಿಳೆಯರು ಈ ಸೀಟ್ ಗಳನ್ನು ಬುಕ್ ಮಾಡಬಹುದು. ಸ್ಲೀಪರ್ ಕೋಚ್ ನ 6 -7, ಎಸಿ ಕೋಚ್ ಗಳಲ್ಲಿ 4 -5 ಲೋಯರ್ ಬರ್ತ್ ಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು ಎಂದು ಹೇಳಲಾಗಿದೆ.