ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವಾಲಯ(MoRTH), ಐಐಟಿ ಮದ್ರಾಸ್ ಮತ್ತು ಡಿಜಿಟಲ್ ಟೆಕ್ ಕಂಪನಿ MapmyIndia ದೊಂದಿಗೆ ಚಾಲಕ ಮತ್ತು ರಸ್ತೆ ಸುರಕ್ಷತೆ ತಂತ್ರಜ್ಞಾನಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಮೂರು ಸೇರಿ ನಾಗರಿಕರಿಗಾಗಿ ಉಚಿತವಾಗಿ ಬಳಸಲು ನ್ಯಾವಿಗೇಷನ್ ಅಪ್ಲಿಕೇಶನ್ ಪ್ರಾರಂಭಿಸಿವೆ. ಇದು ರಸ್ತೆಯಲ್ಲಿರುವಾಗ ಮುಂಬರುವ ಅಪಘಾತ, ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಲಿದೆ.
ನ್ಯಾವಿಗೇಷನ್ ಅಪ್ಲಿಕೇಶನ್ ಸೇವೆಯು ಮುಂಬರುವ ಅಪಘಾತ ಪೀಡಿತ ವಲಯಗಳು, ಸ್ಪೀಡ್ ಬ್ರೇಕರ್‌ಗಳು, ತಿರುವುಗಳು ಮತ್ತು ಗುಂಡಿಗಳು ಸೇರಿ ಇತರ ಅಪಾಯಗಳ ಬಗ್ಗೆ ಚಾಲಕರಿಗೆ ಧ್ವನಿ ಮತ್ತು ದೃಶ್ಯ ಎಚ್ಚರಿಕೆಗಳನ್ನು ಒದಗಿಸುತ್ತದೆ. ದೇಶದಲ್ಲಿ ರಸ್ತೆ ಅಪಘಾತಗಳಿಂದ ಸಂಭವಿಸುವ ಅಪಘಾತಗಳು ಮತ್ತು ಸಾವು ನೋವು ಕಡಿಮೆ ಮಾಡಲು ರಸ್ತೆ ಸಾರಿಗೆ ಸಚಿವಾಲಯದ ಕೈಗೊಂಡ ಯೋಜನೆಯ ಒಂದು ಭಾಗ ಇದಾಗಿದೆ.
MaymyIndia ಅಭಿವೃದ್ಧಿಪಡಿಸಿದ ನ್ಯಾವಿಗೇಷನ್ ಸೇವಾ ಅಪ್ಲಿಕೇಶನ್, ‘MOVE’ 2020 ರಲ್ಲಿ ಸರ್ಕಾರದ ಆತ್ಮನಿರ್ಭರ್ ಆ್ಯಪ್ ಇನ್ನೋವೇಶನ್ ಚಾಲೆಂಜ್ ಅನ್ನು ಗೆದ್ದಿದೆ. ಈ ಸೇವೆಯನ್ನು ನಾಗರಿಕರು ಮತ್ತು ಅಧಿಕಾರಿಗಳು ನಕ್ಷೆಯಲ್ಲಿ ಅಪಘಾತಗಳು, ಅಸುರಕ್ಷಿತ ಪ್ರದೇಶಗಳು, ರಸ್ತೆ ಮತ್ತು ಟ್ರಾಫಿಕ್ ಸಮಸ್ಯೆಗಳನ್ನು ವರದಿ ಮಾಡಲು ಮತ್ತು ಪ್ರಸಾರ ಮಾಡಲು ಬಳಸಬಹುದು. ಇತರ ಬಳಕೆದಾರರಿಗೆ ಸಹಾಯ ಮಾಡಲು. ಡೇಟಾವನ್ನು IIT ಮದ್ರಾಸ್ ಮತ್ತು MapmyIndia ವಿಶ್ಲೇಷಿಸುತ್ತದೆ. ಭವಿಷ್ಯದಲ್ಲಿ ರಸ್ತೆ ಪರಿಸ್ಥಿತಿ ಸುಧಾರಿಸಲು ಸರ್ಕಾರವೂ ಬಳಸುತ್ತದೆ.
ಕಳೆದ ತಿಂಗಳು, ರಸ್ತೆ ಸಚಿವಾಲಯವು ವಿಶ್ವಬ್ಯಾಂಕ್‌ನಿಂದ ಧನಸಹಾಯದೊಂದಿಗೆ ಐಐಟಿ ಮದ್ರಾಸ್‌ನ ಸಂಶೋಧಕರು ರಚಿಸಿದ ಡೇಟಾ ಚಾಲಿತ ರಸ್ತೆ ಸುರಕ್ಷತೆ ಮಾದರಿಯನ್ನು ಅಧಿಕೃತವಾಗಿ ಅಳವಡಿಸಿಕೊಂಡಿದೆ. 32 ಕ್ಕೂ ಹೆಚ್ಚು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಸ್ತೆಗಳನ್ನು ಸುರಕ್ಷಿತವಾಗಿಸಲು ಮತ್ತು ತುರ್ತು ಪ್ರತಿಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡಲು ಸಂಸ್ಥೆಯು ಅಭಿವೃದ್ಧಿಪಡಿಸಿದ ಇಂಟಿಗ್ರೇಟೆಡ್ ರಸ್ತೆ ಅಪಘಾತ ಡೇಟಾಬೇಸ್ (iRAD) ಮಾದರಿಯನ್ನು ಬಳಸುತ್ತದೆ.
IIT ತಂಡವು 2030 ರ ವೇಳೆಗೆ ರಸ್ತೆ ಅಪಘಾತಗಳನ್ನು ಶೇಕಡ 50 ರಷ್ಟು ಕಡಿಮೆ ಮಾಡುವ ಗುರಿ ತಲುಪಲು ಮತ್ತು ಅಂತಿಮವಾಗಿ ರಸ್ತೆ ಟ್ರಾಫಿಕ್ ಅಪಘಾತಗಳಿಂದ ಶೂನ್ಯ ಸಾವಿನ ಗುರಿಯನ್ನು ತಲುಪಲು ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲು ವಿವಿಧ ರಾಜ್ಯ ಸರ್ಕಾರಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಸ್ತೆ ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರಸ್ತೆ ಸುರಕ್ಷತೆಯ ಅಗತ್ಯವನ್ನು ಪದೇ ಪದೇ ಒತ್ತಿ ಹೇಳುತ್ತಾರೆ.