ಆಥೋಪೆಡಿಕ್ಸ್ ವಿಷಯದಲ್ಲಿ ಪಿಜಿ ಮಾಡುತ್ತಿರುವ ವೈದ್ಯರಲ್ಲಿ ಐವರಲ್ಲಿ ಒಬ್ಬರಿಗಿಂತ ಕಡಿಮೆ ಮಂದಿ ಮಾತ್ರವೇ, ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇ) ಹಮ್ಮಿಕೊಳ್ಳುವ ಅಂತಿಮ ಪರೀಕ್ಷೆಯ ಥಿಯರಿ ವಿಭಾಗದಲ್ಲಿ ಪಾಸ್ ಆಗುತ್ತಿದ್ದಾರೆ.
ಇನಿಟಿಯಲ್ಲಿ ಬಹುತೇಕ ಮೂರರಲ್ಲಿ ಇಬ್ಬರು ಫೇಲ್ ಆಗುತ್ತಿದ್ದಾರೆ. ಇದೇ ರೀತಿ, ಪೇಡಿಯಾಟ್ರಿಕ್ಸ್ ವಿಷಯದಲ್ಲಿ ಬರೀ 36% ಮಂದಿ ಮಾತ್ರವೇ ಪಾಸ್ ಆಗಿದ್ದಾರೆ. ನವೆಂಬರ್ 24ರಂದು ಎನ್‌ಬಿಇ ಘೋಷಣೆ ಮಾಡಿದ ಫಲಿತಾಂಶ ಕಂಡು ರಾಷ್ಟ್ರೀಯ ಮಂಡಳಿಯ ಡಿಪ್ಲೋಮೇಟ್ (ಡಿಎನ್‌ಬಿ) ಮಾಡುತ್ತಿರುವ ವೈದ್ಯರು ಶಾಕ್ ಆಗಿದ್ದಾರೆ.
ಖಾಸಗಿ ಆಸ್ಪತ್ರೆಗಳು ಮತ್ತು ಎನ್‌ಬಿಇ ಆಡಳಿತದ ವ್ಯಾಪ್ತಿಯಲ್ಲಿರುವ ಸಂಸ್ಥೆಗಳು ನಡೆಸುವ ಎಂಡಿ/ಎಂಎಸ್ ತತ್ಸಮಾನ ಕೋರ್ಸ್ ಡಿಎನ್‌ಬಿ ಆಗಿದೆ.
BIG NEWS: ಮಹಿಳೆಯರನ್ನು ನಂಬಿಸಿ ವಂಚನೆ; PSI ವಿರುದ್ಧ ಗಂಭೀರ ಆರೋಪ; ದೂರು ನೀಡುತ್ತಿದ್ದಂತೆ ಪರಾರಿಯಾದ ಆರೋಪಿ
ಕೋವಿಡ್ ಅವಧಿಯಲ್ಲಿ ಉಂಟಾದ ಅಡಚಣೆಗಳನ್ನು ಪರಿಗಣಿಸಿ ಪರೀಕ್ಷೆ ನಡೆಸಲಾಗುವುದು ಎಂದು ವೈದ್ಯರಿಗೆ ಖಾತ್ರಿ ನೀಡಲಾಗಿದ್ದರೂ ಸಹ ಪರೀಕ್ಷಾ ಪತ್ರಿಕೆಗಳು ವಿಪರೀತ ಕಠಿಣವಿದ್ದದ್ದಲ್ಲದೇ ಮೌಲ್ಯಮಾಪನವನ್ನೂ ಭಾರೀ ಕಠಿಣವಾಗಿ ನಡೆಸಲಾಗಿದೆ ಎಂದು ವೈದ್ಯರು ಆಪಾದಿಸಿದ್ದಾರೆ.
ಕೋವಿಡ್ ವೇಳೆ ವೈದ್ಯರು ಸರಿಯಾಗಿ ಅಧ್ಯಯನ ಮಾಡಿಲ್ಲ ಎಂದು ಎನ್‌ಬಿಇನ ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಆದರೆ ಕೋವಿಡ್ ಒಂದೇ ಕಾರಣಕ್ಕೆ ಹೀಗೆ ಆಗಿದೆ ಎನ್ನುವುದಾದರೆ ಎಲ್ಲಾ ವಿಶೇಷಣಗಳಲ್ಲೂ ಒಂದೇ ರೀತಿ ಕಳಪೆ ಸಾಧನೆ ಮೂಡಿ ಬರಬೇಕಿತ್ತು ಎಂದು ಆರ್ಥೋಪೆಡಿಕ್ಸ್ ತಜ್ಞರು ತಿಳಿಸಿದ್ದಾರೆ.
ಆದರೆ; 50ಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾದ ಆಬ್ಸ್‌ಟೆಟ್ರಿಕ್ಸ್ ಮತ್ತು ಗೈನೆಕಾಲಾಜಿಯಲ್ಲಿ ಬಹುತೇಕ 90%ನಷ್ಟು ಪಾಸಾಗಿದ್ದರೆ, ಡರ್ಮಟಾಲಜಿ ಮತ್ತು ಜನರಲ್ ಸರ್ಜರಿ, ಆಫ್ತಮಾಲಾಜಿ, ರೇಡಿಯೋ ಡಯಾಗನೋಸಿಸ್ ಮತ್ತು ಸೈಕಿಯಾಟ್ರಿಯಲ್ಲಿ 60%ಗೂ ಅಧಿಕ ಮಂದಿ ಉತ್ತೀರ್ಣರಾಗಿದ್ದಾರೆ.