alex Certify BIG NEWS: ಮಹಿಳೆಯರನ್ನು ನಂಬಿಸಿ ವಂಚನೆ; PSI ವಿರುದ್ಧ ಗಂಭೀರ ಆರೋಪ; ದೂರು ನೀಡುತ್ತಿದ್ದಂತೆ ಪರಾರಿಯಾದ ಆರೋಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಹಿಳೆಯರನ್ನು ನಂಬಿಸಿ ವಂಚನೆ; PSI ವಿರುದ್ಧ ಗಂಭೀರ ಆರೋಪ; ದೂರು ನೀಡುತ್ತಿದ್ದಂತೆ ಪರಾರಿಯಾದ ಆರೋಪಿ

ಕೊಪ್ಪಳ: ಹಾವೇರಿ ಮಹಿಳಾ ಠಾಣೆ ಸಿಪಿಐ ಚಿದಾನಂದ ಪ್ರಕರಣದ ಬೆನ್ನಲ್ಲೇ ಇದೀಗ ಅಂತದ್ದೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಪಿಎಸ್ಐ ಓರ್ವರು ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸುತ್ತಿರುವ ಆರೋಪ ಕೇಳಿಬಂದಿದೆ.

ಕೊಪ್ಪಳ ಜಿಲ್ಲೆಯ ಫಿಂಗರ್ ಪ್ರಿಂಟ್ ವಿಭಾಗದ ಪಿಎಸ್ಐ ಮುತ್ತಪ್ಪ ಬಡಿಗೇರ್ ವಿರುದ್ಧ ಎಸ್ ಪಿ ಕಚೇರಿಗೆ ದೂರು ನೀಡಿರುವ ಯುವತಿಯರು, ಪಿಎಸ್ಐ ಮುತ್ತಪ್ಪ ತಮಗೆ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾಗಿ ಉಲ್ಲೇಖಿಸಿದ್ದಾರೆ.

ಮುತ್ತಪ್ಪ ವಿರುದ್ಧ ಈ ಹಿಂದೆಯೂ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಎಸ್.ಪಿ ಟಿ. ಶ್ರೀಧರ್ ಎರಡು ಬಾರಿ ಎಚ್ಚರಿಕೆ ನೀಡಿದ್ದರು. ಆದಾಗ್ಯೂ ತನ್ನ ವರ್ತನೆ ತಿದ್ದಿಕೊಳ್ಳದ ಪಿಎಸ್ಐ ಹಳೆ ಚಾಳಿ ಮುಂದುವರೆಸಿದ್ದ ಎನ್ನಲಾಗಿದೆ.

ಇದೀಗ ಪಿಎಸ್ಐಯಿಂದ ವಂಚನೆಗೊಳಗಾದ ಮಹಿಳೆಯೊಬ್ಬರ ಕುಟುಂಬ ಎಸ್ ಪಿ ಅವರಿಗೆ ಮೌಖಿಕ ದೂರು ನೀಡಿದ್ದು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಪಿಎಸ್ಐ ಮುತ್ತಣ್ಣ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...