alex Certify ಬಿ2ಬಿ ಮಾರುಕಟ್ಟೆಗೆ ಲಭ್ಯವಾದ ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿ2ಬಿ ಮಾರುಕಟ್ಟೆಗೆ ಲಭ್ಯವಾದ ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿ

ಚೀನಾದ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಬಿವೈಡಿ ಭಾರತದಲ್ಲಿ ಕಳೆದ ಎಂಟು ವರ್ಷಗಳಿಂದಲೂ ಇದೆ. ದೇಶದಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ಮಾರಾಟ ಮಾಡುತ್ತಿರುವ ಬಿವೈಡಿ 2019ರಲ್ಲಿ ಟಿ3 ಎಲೆಕ್ಟ್ರಿಕ್‌ ಎಂಪಿವಿ ಮತ್ತು ಟಿ3 ಎಲೆಕ್ಟ್ರಿಕ್ ವ್ಯಾನ್ ಬಿಡುಗಡೆ ಮಾಡಿದೆ.

ಈ ವರ್ಷದ ನವೆಂಬರ್‌ನಲ್ಲಿ ತನ್ನ ಮೊದಲ ಪ್ರಯಾಣಿಕ ವಾಹನ ಇ6 ಬಿಡುಗಡೆ ಮಾಡಿದ ಬಿವೈಡಿ, ಇದರ ಬೆಲೆಯನ್ನು 29.6 ಲಕ್ಷ ರೂ.ಗಳ ಬದಲಿಗೆ 29.15 ಲಕ್ಷ ರೂ.ಗಳಿಗೆ ಬಿ2ಬಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಬೆಲೆಗಳು ಎಕ್ಸ್‌ಶೋರೂಂ ಮಟ್ಟದವು.

ಮೂರು ವರ್ಷ ಅಥವಾ 1.25 ಲಕ್ಷ ಕಿಮೀ ವಾರಂಟಿಯೊಂದಿಗೆ ಬರುವ ಬಿವೈಡಿ ಇ6, ಬ್ಯಾಟರಿ ಸೆಲ್‌ ಮೇಲೆ ಎಂಟು ವರ್ಷಗಳ ಅಥವಾ 5 ಲಕ್ಷ ಕಿಮೀಗಳ ವಾರಂಟಿ ಕೊಟ್ಟಿದ್ದು, ಟ್ರಾಕ್ಷನ್ ಮೋಟರ್‌ ವಾರಂಟಿಯನ್ನು 8 ವರ್ಷ ಅಥವಾ 1.5 ಲಕ್ಷ ಕಿಮೀಗಳವರೆಗೂ ನೀಡಿದೆ.

BIG NEWS: ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಕೇಸ್; CPI ಸಸ್ಪೆಂಡ್

ಬಿವೈಡಿ ಇ6 ಆರಂಭದ ದಿನಗಳಲ್ಲಿ ಬೆಂಗಳೂರು, ದೆಹಲಿ-ಎನ್‌ಸಿಆರ್‌, ಹೈದರಾಬಾದ್, ಮುಂಬೈ, ಚೆನ್ನೈ, ವಿಜಯವಾಡಾ, ಕೊಚ್ಚಿ ಮತ್ತು ಅಹಮದಾಬಾದ್‌ಗಳಲ್ಲಿ ಲಭ್ಯವಿರಲಿದೆ. ಈ ಜಾಗಗಳನ್ನು ತನ್ನ ಡೀಲರ್‌ ಜಾಲ ಬೆಳೆಸಲು ಮುಂದಾಗಿರುವ ಕಂಪನಿ, ಆರು ಡೀಲರ್‌ಗಳನ್ನು ಅದಾಗಲೇ ಗುರುತಿಸಿದೆ.

ಒಮ್ಮೆ ಚಾರ್ಜ್ ಮಾಡಿದರೆ 415ಕಿಮೀ ಚಲಿಸಬಲ್ಲ ಬಿವೈಡಿ ಇ6, 130ಕಿಮೀ/ಗಂಟೆಯಷ್ಟು ಗರಿಷ್ಠ ವೇಗಮಿತಿ ಹೊಂದಿದೆ. ಡಿಸಿ ಚಾರ್ಜಿಂಗ್‌ ಮೂಲಕ ಬ್ಯಾಟರಿ ಶಕ್ತಿಯನ್ನು 30% ನಿಂದ 80%ಗೆ ಏರಿಸಲು 35 ನಿಮಿಷಗಳು ಸಾಕು ಎಂದು ಕಂಪನಿ ಹೇಳಿಕೊಂಡಿದೆ.

ಸಿಎನ್‌95 ವಾಯುಶುದ್ಧಕ ವ್ಯವಸ್ಥೆ, ಡ್ಯುಯಲ್-ಫ್ರಂಟ್ ಏರ್‌ಬ್ಯಾಗ್‌‌ಗಳು, ವೈಫೈ ಕನೆಕ್ಟಿವಿಟಿ, ಬ್ಲೂಟೂತ್‌, ಸೆಮಿ ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್‌, 10.1 ಇಂಚು ತಿರುಗಬಲ್ಲ ಟಚ್‌ಸ್ಕ್ರೀನ್‌ನಂಥ ಆಕರ್ಷಕ ಫೀಚರ್‌ಗಳನ್ನು ಬಿವೈಡಿ ಇ6 ಹೊಂದಿದೆ.

BYD e6 blue.jpeg
BYD e6 rear.jpg

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...