ವಿಶ್ವಸಂಸ್ಥೆಯ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಹೈಟಿಯ ಸೂಪ್ ಸೇರ್ಪಡೆ 19-12-2021 1:05PM IST / No Comments / Posted In: Latest News, Live News, International ಹೈಟಿಯ ಸಾಂಪ್ರದಾಯಿಕ ಸೂಪ್ ಅನ್ನು ಯುನೆಸ್ಕೋ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಿದೆ. ಜೌಮೌ ಸೂಪ್ ಹೈಟಿಯ ಸ್ವಾತಂತ್ರ್ಯದ ವೀರರು ಮತ್ತು ನಾಯಕಿಯರ ಕಥೆಯನ್ನು ಹೇಳುತ್ತದೆ. ದಂಗೆಕೋರ ಕಪ್ಪು ಗುಲಾಮರು (ಜನಾಂಗ) ರಚಿಸಿದ ಮೊದಲ ರಾಷ್ಟ್ರವಾಗಿ ಜನವರಿ 1, 1804ರಂದು, ಹೈಟಿ ಸ್ವಾತಂತ್ರ್ಯ ಪಡೆಯುವವರೆಗೂ ಸ್ಕ್ವ್ಯಾಷ್-ಆಧಾರಿತ ಸೂಪ್ ಗುಲಾಮರಿಗೆ ದೀರ್ಘಕಾಲದವರೆಗೆ ನಿಷೇಧಿಸಲ್ಪಟ್ಟಿತ್ತು. ಅವರು ಅಂತಿಮವಾಗಿ ಸೂಪ್ ಅನ್ನು ಸೇವಿಸುವ ಮೂಲಕ ತಮ್ಮ ಸ್ವಾತಂತ್ರ್ಯವನ್ನು ಆಚರಿಸಿದ್ದರು. ಅಲ್ಲದೆ ಹೈಟಿ ದೇಶದ ಜನರು ಸಾಂಪ್ರದಾಯಿಕವಾಗಿ ಹೊಸ ವರ್ಷದ ದಿನದಂದು ಗುಲಾಮಗಿರಿಯಿಂದ ವಿಮೋಚನೆಯ ವಾರ್ಷಿಕೋತ್ಸವವನ್ನು ಸ್ಮರಿಸುತ್ತಾರೆ. ಇತರ ಕೆರಿಬಿಯನ್ ಸಂಪ್ರದಾಯಗಳಲ್ಲಿ ಜಮೈಕಾದ ರೆಗ್ಗೀ ಸಂಗೀತವನ್ನು 2018 ರಲ್ಲಿ ಯುನೆಸ್ಕೋ ಪಟ್ಟಿಗೆ ಸೇರಿಸಲಾಗಿದೆ. 🔴 BREAKING The Intangible Cultural Heritage Committee has just decided to inscribe Joumou soup on the Representative List of the #IntangibleHeritage of Humanity. Congratulations Haiti🇭🇹!👏👏 ℹ️https://t.co/AJ36dCjPrL #LivingHeritage pic.twitter.com/1pu54gpjKx — UNESCO 🏛️ #Education #Sciences #Culture 🇺🇳 (@UNESCO) December 16, 2021