ವರ್ತಕರ (ಮರ್ಚೆಂಟ್) ಜಾಲತಾಣ/ಅಪ್ಲಿಕೇಶನ್‌ನಲ್ಲಿ ಸೇವ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿಮ್ಮ ಕಾರ್ಡ್ ವಿವರಗಳನ್ನು ರಿಸರ್ವ್ ಬ್ಯಾಂಕ್ ಸೂಚನೆಯನುಸಾರ ಭದ್ರತೆಯ ಕಾರಣಗಳಿಂದಾಗಿ ಡಿಲೀಟ್ ಮಾಡಲಾಗುವುದು.
ಇದರ ಅರ್ಥ, ಯಾವುದೇ ಆನ್ಲೈನ್ ವಹಿವಾಟು ನಡೆಸಲು ನೀವು ಕಾರ್ಡ್‌ನ ಪೂರ್ಣ ವಿವರಗಳನ್ನು ಭರಿಸಬೇಕು ಇಲ್ಲವಾದಲ್ಲಿ ಟೋಕನ್ ಮುಖಾಂತರ ವ್ಯವಹಾರ ಮಾಡಬೇಕಾಗುತ್ತದೆ.
ಕೋವಿಡ್-19: ಐದು ತಿಂಗಳಲ್ಲೇ ದಿನವೊಂದರಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಿಸಿದ ದೆಹಲಿ
ಜನವರಿ 1, 2022ರಿಂದ ಕಾರ್ಡ್ ಸಂಖ್ಯೆ, ಸಿವಿವಿ ಮತ್ತು ಎಕ್ಸ್‌ಪೈರಿ ದಿನಾಂಕ ಹಾಗೂ ಸೂಕ್ಷ್ಮವಾದ ಇತರ ಮಾಹಿತಿಗಳನ್ನು ಆನ್ಲೈನ್ ವಹಿವಾಟುಗಳನ್ನು ಸಂಸ್ಕರಿಸುವ ವೇಳೆ, ವರ್ತಕರು ತಮ್ಮ ಪೋರ್ಟಲ್/ಅಪ್ಲಿಕೇಶನ್‌ಗಳಲ್ಲಿ ಸ್ಟೋರ್ ಮಾಡುವಂತಿಲ್ಲ.
ಇಲ್ಲವಾದಲ್ಲಿ, ಗ್ರಾಹಕರು ತಾವು ವ್ಯವಹಾರ ಮಾಡುವ ವರ್ತಕರಿಂದ ತಮ್ಮ ಕಾರ್ಡ್‌ಅನ್ನು ಟೋಕನೈಸ್ ಮಾಡಿಸಿಕೊಂಡು ವಹಿವಾಟು ಮುಂದುವರೆಸಬಹುದಾಗಿದೆ. ಟೋಕನೈಸ್ ಮಾಡುವ ಕ್ರಿಯೆ ಬಗ್ಗೆ ಹೆಚ್ಚಿನ ವಿವರಗಳನ್ನು ನಿಮ್ಮ ಬ್ಯಾಂಕಿನ ಜಾಲತಾಣದಲ್ಲಿ ನೀಡಿರಲಾಗುತ್ತದೆ.