ದೇಶಾದ್ಯಂತ ಇರುವ 25 ಹೈಕೋರ್ಟ್ಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ 55%ರಷ್ಟು ಮೂರಕ್ಕಿಂತ ಹೆಚ್ಚು ವರ್ಷಗಳಿಂದಲೂ ನಡೆಯುತ್ತಿವೆ ಎಂದು ಸರ್ಕಾರಿ ದತ್ತಾಂಶ ತಿಳಿಸುತ್ತಿದೆ.
ಮೂರಕ್ಕಿಂತ ಹೆಚ್ಚಿನ ವರ್ಷಗಳಿಂದ ಬಾಕಿ ಇರುವ 30.61 ಲಕ್ಷ ಪ್ರಕರಣಗಳ ಪೈಕಿ 40%ನಷ್ಟು ಸಿವಿಲ್ ಪ್ರಕರಣಗಳಾಗಿವೆ ಎಂದು ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ (ಎನ್ಜೆಡಿಜಿ) ತಿಳಿಸಿದೆ.
ಒಟ್ಟಾರೆ 56.38 ಲಕ್ಷ ಪ್ರಕರಣಗಳಲ್ಲಿ, 77%ನಷ್ಟು ಪ್ರಕರಣಗಳು ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯಿಂದ ಇತ್ಯರ್ಥವಾಗದೇ ಉಳಿದಿವೆ. 20%ನಷ್ಟು ಕೇಸುಗಳು 10 ವರ್ಷಗಳು ಅಥವಾ ಹೆಚ್ಚಿನ ಕಾಲದಿಂದ ಹಾಗೇ ಉಳಿದಿವೆ.
ಪುಟ್ಟ ಕಂದನ ಮೊದಲ ತೊದಲು ನುಡಿ ಕೇಳಿ ಅಚ್ಚರಿಗೊಳಗಾದ ತಾಯಿ..! ಮಗು ಹೇಳಿದ ಮಾತು ಕೇಳಿದ್ರೆ ನೀವು ಶಾಕ್ ಆಗ್ತೀರಾ..!
ಸುಪ್ರೀಂ ಕೋರ್ಟ್ನಲ್ಲಿ ಕನಿಷ್ಠ 69,855 ಪ್ರಕರಣಗಳು ಬಾಕಿ ಉಳಿದಿವೆ ಎಂದು ಡಿಸೆಂಬರ್ 6ರವರೆಗಿನ ಪರಮೋಚ್ಛ ನ್ಯಾಯಾಲಯ ಕಾಪಾಡಿಕೊಂಡಿರುವ ಮಾಹಿತಿ ತಿಳಿಸುತ್ತಿದೆ. ಜಿಲ್ಲಾ ಮತ್ತು ಇನ್ನಿತರ ಕೆಳಹಂತದ ನ್ಯಾಯಾಲಯಗಳಿಗೆ ಬಂದರೆ, ಒಟ್ಟಾರೆ 4.06 ಕೋಟಿ ಪ್ರಕರಣಗಳು ಬಾಕಿ ಇವೆ ಎಂದು ನ್ಯಾಯಾಂಗ ಇಲಾಖೆಯ ಅಂಕಿ ಅಂಶಗಳು ತೋರುತ್ತಿವೆ.
ದೇಶಾದ್ಯಂತ ಇರುವ ಹೈಕೋರ್ಟ್ಗಳಿಗೆ 1,098 ನ್ಯಾಯಾಧೀಶರನ್ನು ಹೊಂದಲು ಅನುಮತಿ ಇದ್ದರೂ, 37%ನಷ್ಟು ಹುದ್ದೆಗಳು ಖಾಲಿ ಇವೆ. 694 ನ್ಯಾಯಾಧೀಶರು ಮಾತ್ರವೇ ಕೆಲಸ ಮಾಡುತ್ತಿದ್ದು, 404 ನ್ಯಾಯಾಧೀಶರ ಹುದ್ದೆಗಳು ಖಾಲಿ ಇವೆ.