ದೇಶದಲ್ಲಿ 62 ಲಕ್ಷದಷ್ಟು ಕೋವಿಡ್ ಲಸಿಕೆಗಳು ವ್ಯರ್ಥವಾಗಿದ್ದು, ಇದರಲ್ಲಿ ಅರ್ಧದಷ್ಟು ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯ ಪ್ರದೇಶಗಳಲ್ಲೇ ಆಗಿದೆ.
16.48 ಲಕ್ಷ ಲಸಿಕೆಗಳನ್ನು ವ್ಯರ್ಥ ಮಾಡಿರುವ ಮಧ್ಯ ಪ್ರದೇಶ ಈ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದು, ಉತ್ತರ ಪ್ರದೇಶ (12.6 ಲಕ್ಷ) ಮತ್ತು ರಾಜಸ್ಥಾನ (6.86 ಲಕ್ಷ) ನಂತರದ ಸ್ಥಾನಗಳಲ್ಲಿವೆ. ಒಟ್ಟಾರೆಯಾಗಿ ಈ ಮೂರು ರಾಜ್ಯಗಳೇ 36 ಲಕ್ಷದಷ್ಟು ಲಸಿಕೆಗಳನ್ನು ಹಾಳು ಮಾಡಿವೆ.
ಕಳೆದ 11 ತಿಂಗಳ ಅವಧಿಯಲ್ಲಿ ದೇಶದ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್-19 ಲಸಿಕೆಗಳು ಎಷ್ಟು ವ್ಯರ್ಥವಾಗಿವೆ ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್ ಲೋಕಸಭೆಗೆ ತಿಳಿಸಿದ್ದಾರೆ. 11 ರಾಜ್ಯಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಲಸಿಕೆಗಳು ವ್ಯರ್ಥವಾಗಿವೆ.
ಮದುವೆ ಶಾಸ್ತ್ರ ನಡೆಯುತ್ತಿರುವಾಗಲೇ ನಿದ್ರಿಸಿದ ವಧು…! ವಿಡಿಯೋ ವೈರಲ್
ಕರ್ನಾಟಕದಲ್ಲಿ 1.27 ಲಕ್ಷ ಲಸಿಕೆಗಳು ವ್ಯರ್ಥವಾಗಿದ್ದು, ತಮಿಳುನಾಡು (2.38 ಲಕ್ಷ), ಆಂಧ್ರ ಪ್ರದೇಶ (3.80 ಲಕ್ಷ), ಗುಜರಾತ್ (2.28 ಲಕ್ಷ), ಅಸ್ಸಾಂ (4.58 ಲಕ್ಷ), ಜಮ್ಮು ಮತ್ತು ಕಾಶ್ಮೀರದಲ್ಲಿ (4.57 ಲಕ್ಷ) ದೊಡ್ಡ ಮಟ್ಟದಲ್ಲಿ ಲಸಿಕೆಗಳು ವ್ಯರ್ಥವಾಗಿವೆ.
ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆಗಳನ್ನು ಉಚಿತವಾಗಿ ಪೂರೈಸಲು ಕೇಂದ್ರದ ಬೊಕ್ಕಸಕ್ಕೆ 19,675.46 ಕೋಟಿ ರೂಪಾಯಿ ಹೊರೆ ಬಿದ್ದಿದೆ ಎಂದು ಸಚಿವರು ಲೋಕಸಭೆಯಲ್ಲಿ ತಿಳಿಸಿದ್ದಾರೆ.