’ಆತಂಕದ ಅವತಾರಿ’ ಎಂಬ ಲೇಬಲ್ ಪಡೆದುಕೊಂಡು ಮೂರು ವಾರಗಳ ಬಳಿಕ ಒಮಿಕ್ರಾನ್ ಸೋಂಕು ಜಗತ್ತಿನ 94 ದೇಶಗಳಲ್ಲಿ ವ್ಯಾಪಿಸಿದೆ.
ಜಗತ್ತಿನಾದ್ಯಂತ ವಿಜ್ಞಾನಿಗಳು ಈ ಅವತಾರಿ ಸೋಂಕು ವ್ಯಾಪಕವಾಗಿ ಪಸರುತ್ತಿದ್ದರೂ ಅಷ್ಟಾಗಿ ಗಂಭೀರ ಸಮಸ್ಯೆಗಳನ್ನು ತಂದಿಲ್ಲದಿರುವುದರ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ.
“ಒಮಿಕ್ರಾನ್ ಮತ್ತು ಡೆಲ್ಟಾಗಳ ನಡುವೆ ಹೋಲಿಕೆಗಳನ್ನು ಮಾಡುವ ಸಂಬಂಧ ಒಂದಿಷ್ಟು ಅಧ್ಯಯನಗಳು ಚಾಲ್ತಿಯಲ್ಲಿವೆ. ಬ್ರಿಟನ್‌ನ ಕೆಲ ಆರಂಭಿಕ ಅಧ್ಯಯನಗಳು ಎರಡನೇ ಪಸರುವಿಕೆಯನ್ನು ವಿಶ್ಲೇಷಿಸಿವೆ. ದೆಲ್ಟಾಗೆ ಹೋಲಿಸಿದರೆ ಎರಡನೇ ಪಸರುವಿಕೆ ಜೋರಾಗಿರುವುದನ್ನು ನೋಡಿದರೆ, ಇದು ಇನ್ನೂ ಆರಂಭವಷ್ಟೇ” ಎಂದು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕೋವಿಡ್ ತಾಂತ್ರಿಕ ಮುಖ್ಯಸ್ಥೆಯಾಗಿರುವ ಮಾರಿಯಾ ವಾನ್ ಕರ್ಕೋವೇ ತಿಳಿಸಿದ್ದಾರೆ.
ಸ್ಪೈಕ್ ಪ್ರೋಟೀನ್‌ನಲ್ಲಿ ಕೆಲವೊಂದು ಮಾರ್ಪಾಡುಗಳಾಗಿ, ಈ ಪ್ರೋಟೀನ್‌ಗಳು ಮಾನವರ ಕೋಶಗಳಿಗೆ ಅಂಟಿಕೊಳ್ಳುವ ಕಾರಣ ಒಮಿಕ್ರಾನ್ ಪಸರುವಿಕೆ ಜೋರಾದ ಪ್ರಮಾಣದಲ್ಲಿದೆ ಎನ್ನುತ್ತಾರೆ ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ತುರ್ತು ಕಾರ್ಯಕ್ರಮಗಳ ಕಾರ್ಯನಿರ್ವಾಹಕ ನಿರ್ದೇಶಕ.
ಮದುವೆ ಶಾಸ್ತ್ರ ನಡೆಯುತ್ತಿರುವಾಗಲೇ ನಿದ್ರಿಸಿದ ವಧು…! ವಿಡಿಯೋ ವೈರಲ್
ಡೆಲ್ಟಾವತಾರಿಯ 70 ಪಟ್ಟು ವೇಗದಲ್ಲಿ ಒಮಿಕ್ರಾನ್ ಪಸರುತ್ತವೆ ಎಂದು ಹಾಂಕಾಂಗ್ ವಿವಿಯಲ್ಲಿ ನಡೆಸಿದ ಅಧ್ಯಯನವೊಂದು ತಿಳಿಸಿದೆ. ಶ್ವಾಸಕೋಶಗಳಿಗೆ ಗಾಳಿ ಬರಲು ದಾರಿ ಮಾಡಿಕೊಡುವ ಬ್ರಾಂಕಿಗಳಲ್ಲಿ ಈ ಸೋಂಕು ತೀವ್ರವಾಗಿ ವರ್ಧಿಸಲಿದ್ದು, ಸುಲಭದಲ್ಲಿ ಪಸರಬಲ್ಲದಾಗಿದೆ, ಆದರೆ ಒಮಿಕ್ರಾನ್ ಶ್ವಾಸಕೋಶಗಳಲ್ಲಿ ಅಷ್ಟು ಪರಿಣಾಮಕಾರಿಯಾಗಿ ಮರುಸೃಷ್ಟಿಗಳನ್ನು ಮಾಡದೇ ಇರುವ ಕಾರಣ ಈ ಸೋಂಕು ಅಷ್ಟು ತೀವ್ರವಾಗಿ ಇರುವುದಿಲ್ಲ ಎಂದು ಈ ಅಧ್ಯಯನ ತಿಳಿಸಿದೆ.
ಹೈದರಾಬಾದ್‌ನ ಯಶೋಧಾ ಆಸ್ಪತ್ರೆಯ ಡಾ. ಚೇತನ್ ರಾವ್ ಈ ಕುರಿತು ಮಾತನಾಡಿ, ಸೋಂಕಿನ ತೀವ್ರತೆ ಅದರ ಮರುಸೃಷ್ಟಿ ಕ್ಷಮತೆ ಮಾತ್ರವಲ್ಲದೇ ಅದು ಹೊಕ್ಕಿರುವ ಜೀವಿಯ ರೋಗನಿರೋಧಕ ಶಕ್ತಿಯ ಮೇಲೂ ಅವಲಂಬಿತವಾಗಿದೆ ಎನ್ನುತ್ತಾರೆ.
ಭಾರತದಲ್ಲಿ ಇದುವರೆಗೂ ಲಸಿಕೆ ಪಡೆಯದೇ ಇರುವವರು, ಸೋಂಕು ತಗುಲದವರು ಹಾಗೂ ಇತರೆ ರೋಗಗಳಿರುವ ಮಂದಿಗೆ ಈ ಸೋಂಕು ತಗುಲುವ ಸಾಧ್ಯತೆ ಜೋರಾಗಿದೆ ಎನ್ನುತ್ತಾರೆ ಡಾ. ರಾವ್.