ಹೆಚ್ಚಾಗಿ ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಮಗುವಾಡುವ ಮೊದಲ ಪದಗಳನ್ನು ಕೇಳಲು ಬಹಳ ಉತ್ಸುಕರಾಗಿರುತ್ತಾರೆ. ತಮ್ಮ ಕಂದ ಯಾವಾಗ ಮಾತನಾಡಲು ಪ್ರಾರಂಭಿಸುತ್ತೆ ಅಂತಾ ಅವರು ಕುತೂಹಲದಿಂದ ಕಾಯುತ್ತಾರೆ.
ಮಗುವಿನ ಮೊದಲ ಪದವು ಸಾಮಾನ್ಯವಾಗಿ ಹಾಯ್, ಬಾ, ಮಾಮಾ ಮುಂತಾದ ಸರಳ ಪದಗಳಿಂದ ಕೂಡಿರುತ್ತದೆ. ಆದರೆ, ತನ್ನ ಮಗು ಮೊದಲು ಮಾತು ಆಲ್ರೈಟ್ ಬ್ರೂವ್ ಎಂದು ಹೇಳಿದ್ರೆ, ಯಾರಿಗೂ ಅಚ್ಚರಿಯಾಗದೆ ಇರಲಾರದು.
ಹೌದು, ಬ್ರಿಟಿಷ್ ದಂಪತಿ ತಮ್ಮ ಮಗುವಿನ ಮೊದಲ ತೊದಲುನುಡಿಗಾಗಿ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದರು. ಪಾಲಕರಾದ ಕಾರ್ಮೆನ್ ಬಿಶ್ ಹಾಗೂ ಕೀರೆನ್ ಪಾರ್ಸನ್ಸ್ ಅವರ 9 ತಿಂಗಳ ಮಗು ಆಲ್ರೈಟ್ ಬ್ರೂವ್ ಎಂದು ಹೇಳಿದಾಗ ಅವರು ಆಶ್ಚರ್ಯಕ್ಕೊಳಗಾಗಿದ್ದಾರೆ.
ಮಗುವಿನ ಮೊದಲ ಮಾತಿನ ವಿಡಿಯೋ ಮಾಡಿದ ತಾಯಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಪುಟ್ಟ ಕಂದನ ಆಲ್ರೈಟ್ ಬ್ರೂವ್ ಎಂಬ ಮಾತು ಕೇಳಿ ಕುಟುಂಬ ನಕ್ಕು ನಕ್ಕು ಸುಸ್ತಾಗಿದ್ಯಂತೆ. ಟಿಕ್ ಟಾಕ್ ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಒಂದು ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.