ಭಾರತೀಯ ವಿವಾಹಗಳಲ್ಲಿ ಸಂಪ್ರದಾಯಗಳು ತುಸು ಹೆಚ್ಚೇ ಇರುತ್ತವೆ. ಮದುವೆಯ ಮುಂಚಿನ ದಿನ ಮೆಹಂದಿ ಶಾಸ್ತ್ರ, ಅರಶಿನ ಶಾಸ್ತ್ರ, ನಂತರ ಮದುವೆ ದಿನ, ಮದುವೆ ನಂತರ ಕೂಡ ಅನೇಕ ಶಾಸ್ತ್ರಗಳು ಇರುತ್ತವೆ. ಶುಭ ಸಮಯ ನೋಡಿ ಶಾಸ್ತ್ರಗಳನ್ನು ಮಾಡಲಾಗುತ್ತದೆ.
ಕೆಲವೊಮ್ಮೆ ಈ ಆಚರಣೆಗಳು ಬೆಳಗಿನ ಜಾವದವರೆಗೂ ನಡೆಸಲಾಗುತ್ತದೆ. ಹೀಗಾಗಿ ನವಜೋಡಿ ಎಚ್ಚರವಾಗಿರುವುದು ಅಷ್ಟೇ ಮುಖ್ಯ. ಅಯ್ಯೋ….. ಇವರು ಇದನ್ನೆಲ್ಲಾ ಯಾಕೆ ಹೇಳುತ್ತಿದ್ದಾರೆ ಅಂತಾ ಅನ್ಕೋತಿದ್ದೀರಾ..? ಈ ಸ್ಟೋರಿ ಓದಿ ನಿಮಗೆ ಗೊತ್ತಾಗುತ್ತದೆ.
ದೇಸಿ ವಧುವೊಬ್ಬಳ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಸುಂದರವಾದ ಕೆಂಪು ಬಣ್ಣದ ಸೀರೆಯಲ್ಲಿ ಅಲಂಕಾರಗೊಂಡಿರುವ ವಧು ಸೋಫಾ ಮೇಲೆ ಕುಳಿತುಕೊಂಡು ತೂಕಡಿಸಿದ್ದಾಳೆ. ಪಕ್ಕದಲ್ಲಿ ಲಗುಬಗೆಯಿಂದಲೇ ವರ ನಿಂತಿದ್ದರೆ, ಪೂಜೆ-ಶಾಸ್ತ್ರಗಳನ್ನು ಆಚರಿಸಲಾಗುತ್ತಿತ್ತು. ಈ ವೇಳೆ ವಧುವಿಗೆ ಮಾತ್ರ ನಿದ್ದೆ ತಡೆದುಕೊಳ್ಳಲಾಗದೆ, ಸೋಫಾದಲ್ಲಿ ಆರಾಮಾಗಿ ಕುಳಿತು ನಿದ್ರಿಸಿದ್ದಾಳೆ.
ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಈಗಾಗಲೇ ಬೆಳಿಗ್ಗೆ 6.30 ಆಗಿದ್ದು, ಮದುವೆ ಶಾಸ್ತ್ರಗಳು ಇನ್ನೂ ನಡೆಯುತ್ತಿವೆ. ವಧು ಮಾತ್ರ ನಿದ್ದೆಯಲ್ಲಿದ್ದಾಳೆ ಎಂಬಂತಹ ಶೀರ್ಷಿಕೆ ನೀಡಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, 90 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರು ವಿಡಿಯೋವನ್ನು ಇಷ್ಟಪಟ್ಟಿದ್ದಾರೆ.
https://youtu.be/EtFPipjb-xk