ಬೆಂಗಳೂರು: ದಕ್ಷಿಣ ಕನ್ನಡದಲ್ಲಿ ಇಂದು 5 ಒಮಿಕ್ರಾನ್ ಕೇಸ್ ಗಳು ಪತ್ತೆಯಾಗಿವೆ. ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಈ ಕುರಿತಾಗಿ ಟ್ವೀಟ್ ಮಾಡಿದ್ದಾರೆ.
ದಕ್ಷಿಣ ಕನ್ನಡದ ಎರಡು ಶಿಕ್ಷಣ ಸಂಸ್ಥೆಗಳಲ್ಲಿ ಒಮಿಕ್ರಾನ್ ಕೇಸ್ ಪತ್ತೆಯಾಗಿವೆ. ಕ್ಲಸ್ಟರ್ – 1 14 ಕೋವಿಡ್ ಕೇಸ್ ಗಳಲ್ಲಿ 4 ಒಮಿಕ್ರಾನ್ ಪಾಸಿಟಿವ್ ಕಂಡು ಬಂದಿದೆ.
ಕ್ಲಸ್ಟರ್ -2 19 ಕೇಸ್ ಗಳ ಪೈಕಿ 1 ಒಮಿಕ್ರಾನ್ ಪಾಸಿಟಿವ್ ವರದಿ ಬಂದಿದೆ. ಬ್ರಿಟನ್ ನಿಂದ ಬಂದ ಓರ್ವ ವ್ಯಕ್ತಿಗೆ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಕರ್ನಾಟಕದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ.