alex Certify ಗುಜರಾತ್​ನ ಗಲಭೆ ಸಮಿತಿಯ ಮುಖ್ಯಸ್ಥರಾಗಿದ್ದ ನಿವೃತ್ತ ನ್ಯಾಯಮೂರ್ತಿ ಜಿ.ಟಿ. ನಾನಾವತಿ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಜರಾತ್​ನ ಗಲಭೆ ಸಮಿತಿಯ ಮುಖ್ಯಸ್ಥರಾಗಿದ್ದ ನಿವೃತ್ತ ನ್ಯಾಯಮೂರ್ತಿ ಜಿ.ಟಿ. ನಾನಾವತಿ ಇನ್ನಿಲ್ಲ

2002ರ ಗುಜರಾತ್​ ಗಲಭೆ ಹಾಗೂ 1984ರ ಸಿಖ್​​ ವಿರೋಧಿ ದಂಗೆಗಳ ತನಿಖೆಗಳ ಆಯೋಗದ ನೇತೃತ್ವ ವಹಿಸಿದ್ದ ನಿವೃತ್ತ ನ್ಯಾಯಮೂರ್ತಿ ಜಿ.ಟಿ. ನಾನಾವತಿ ಅಹಮದಾಬಾದ್​ ನಿವಾಸದಲ್ಲಿ ನಿಧನರಾಗಿದ್ದಾರೆ. ಜಿ.ಟಿ. ನಾನಾವತಿ ಅವರಿಗೆ 86 ವರ್ಷ ವಯಸ್ಸಾಗಿತ್ತು.

ಗೋಧ್ರಾ ರೈಲು ಹತ್ಯಾಕಾಂಡ ಹಾಗೂ ಗುಜರಾತ್​​ನಲ್ಲಿ ಸುಮಾರು 1200ಕ್ಕೂ ಅಧಿಕ ಜನರ ಸಾವಿಗೆ ಕಾರಣವಾದ ಗಲಭೆಗಳ ತನಿಖೆಗೆ ನೇಮಕಗೊಂಡ ನ್ಯಾಯಮೂರ್ತಿ ನಾನಾವತಿ ಆಯೋಗವು ಈಗಿನ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವಾಲಯ ಮತ್ತು ಪೊಲೀಸರಿಗೆ ಕ್ಲೀನ್​ಚಿಟ್​ ನೀಡಿದೆ. ವಿಚಾರಣೆಯ ಸಂದರ್ಭದಲ್ಲಿ ಗುಜರಾತ್​ನ ಆಗಿನ ಸಿಎಂ ಆಗಿದ್ದ ಮೋದಿಗೆ ಆಯೋಗ ಸಮನ್ಸ್​ ನೀಡಿರಲಿಲ್ಲ.

ನಿವೃತ್ತ ನ್ಯಾಯಮೂರ್ತಿ ನಾನಾವತಿ 1958ರಲ್ಲಿ ಬಾಂಬೆ ಹೈಕೋರ್ಟ್​ನಲ್ಲಿ ವಕೀಲರಾಗಿ ನೇಮಕವಾಗಿದ್ದರು. ಹಾಗೂ ಸರ್ಕಾರಿ ನ್ಯಾಯವಾದಿಗಳ ಸಮಿತಿಯಲ್ಲಿ ಇದ್ದರು. ಜುಲೈ 1979ರಲ್ಲಿ ಗುಜರಾತ್​ ಹೈಕೋರ್ಟ್​ನಲ್ಲಿ ಖಾಯಂ ಜಡ್ಜ್​ ಆಗಿ ನೇಮಕಗೊಂಡಿದ್ದರು ಬಳಿಕ ಅವರನ್ನು 1993ರಲ್ಲಿ ಒರಿಸ್ಸಾ ಹೈಕೋರ್ಟ್​ಗೆ ವರ್ಗಾಯಿಸಲಾಗಿತ್ತು.

1994ರಲ್ಲಿ ನಾನಾವತಿ ಒರಿಶಾ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. 1994ರಲ್ಲಿ ರಾಜ್ಯ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಮಾರ್ಚ್​ 1995ರಲ್ಲಿ ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು ಹಾಗೂ 2000ನೇ ಇಸ್ವಿಯಲ್ಲಿ ಸೇವೆಯಿಂದ ನಿವೃತ್ತಿಯಾದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...