ರಾಮನಗರ : ಕಳ್ಳನೊಬ್ಬ ಮನೆಯ ಮಾಲೀಕರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಶಾಂತಿನಗರದಲ್ಲಿ ಈ ಘಟನೆ ನಡೆದಿದೆ. ಕಳ್ಳನೊಬ್ಬ ಸತೀಶ್ ಕುಮಾರ್ ಹಾಗೂ ಚಂದ್ರಶೇಖರಯ್ಯ ಎಂಬುವವರ ಮನೆಯಲ್ಲಿ ಕಳ್ಳತನಕ್ಕೆ ಹೋಗಿದ್ದಾನೆ. ಮನೆಯಲ್ಲಿ ಯಾರೂ ಇಲ್ಲ ಎಂದು ಭಾವಿಸಿ ಕಳ್ಳ, ಮನೆಗೆ ನುಗ್ಗಿದ್ದಾನೆ. ಕಳ್ಳತನ ಮಾಡುತ್ತಿದ್ದ ಸದ್ದು ಕೇಳಿದ ಮನೆಯ ಮಾಲೀಕರು ಎದ್ದು ಕಳ್ಳನನ್ನು ಹಿಡಿದು ಜೋರಾಗಿ ಕಿರುಚಿದ್ದಾರೆ.
ಇವರ ಕಿರುಚಾಟ ಕೇಳಿ, ಅಕ್ಕ- ಪಕ್ಕದ ಮನೆಯವರು ಓಡಿ ಬಂದು ಖದೀಮನನ್ನು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.