alex Certify ಒಳ ಉಡುಪನ್ನು ಮಾಸ್ಕ್‌ನಂತೆ ಧರಿಸಿದ್ದ ಪ್ರಯಾಣಿಕನ ಹೊರಕಳಿಸಿದ ವಿಮಾನ ಸಿಬ್ಬಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಳ ಉಡುಪನ್ನು ಮಾಸ್ಕ್‌ನಂತೆ ಧರಿಸಿದ್ದ ಪ್ರಯಾಣಿಕನ ಹೊರಕಳಿಸಿದ ವಿಮಾನ ಸಿಬ್ಬಂದಿ

ಕೋವಿಡ್-19 ಶುರುವಾದಾಗಿನಿಂತ ಎಲ್ಲೆಡೆ ಮಾಸ್ಕ್‌ಧಾರಣೆ ಕಡ್ಡಾಯವಾಗಿಬಿಟ್ಟಿದೆ. ವಿಮಾನಗಳಲ್ಲಂತೂ ಮಾಸ್ಕ್ ಇಲ್ಲದೇ ಕಾಲಿಡಲು ಸಾಧ್ಯವೇ ಇಲ್ಲ.

ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ವಿಮಾನ ಪ್ರಯಾಣಿಕನೊಬ್ಬ ಮಾಸ್ಕ್ ಇಲ್ಲದ ಕಾರಣಕ್ಕೆ ಒಳಉಡುಪನ್ನೇ ಮಾಸ್ಕ್‌ನಂತೆ ಧರಿಸಿರುವುದನ್ನು ನೋಡಬಹುದಾಗಿದೆ. ಆಡಂ ಜೆನ್ನೆ ಹೆಸರಿನ ಈ ವ್ಯಕ್ತಿ ವಿಮಾನದೊಳಗೆ ಕೆಂಪು ಬಣ್ಣದ ಒಳ ಉಡುಪನ್ನು ಮಾಸ್ಕ್‌ನಂತೆ ಧರಿಸಿ ಸೀಟಿನ ಮೇಲೆ ಕುಳಿತಿದ್ದಾನೆ.

ಹುಡುಗಿಯರು 16 ನೇ ವಯಸ್ಸಿಗೆ ಮದುವೆಯಾದರೆ ತಪ್ಪೇನು…? ಸಮಾಜವಾದಿ ಸಂಸದನ ಪ್ರಶ್ನೆ

ಫ್ಲಾರಿಡಾದ ಕೇಪ್ ಕೋರಲ್‌ ಎಂಬ ಊರಿನ ಈ ವ್ಯಕ್ತಿ ಯುನೈಟೆಡ್ ಏರ್‌ಲೈನ್ಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಿಷೇಧಕ್ಕೆ ಒಳಗಾಗಿದ್ದಾರೆ. ವಿಮಾನದ ಸಿಬ್ಬಂದಿಯೊಂದಿಗೆ ವಾದ ಮಾಡುವ ಆಡಂ ಕೆಲ ಕ್ಷಣಗಳ ಬಳಿಕ ವಿಮಾನದಿಂದ ಹೊರನಡೆದಿದ್ದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.,

ವಿಮಾನ ಟೇಕಾಫ್ ಆಗುವ ಮುನ್ನವೇ ಆತನಿಗೆ ವಿಮಾನದಿಂದ ಹೊರಗೆ ಹೋಗುವಂತೆ ಸಿಬ್ಬಂದಿ ಕೋರಿದ್ದಾರೆ. ಮೊದಲೇ ಮಾಸ್ಕ್ ನಿಂದ ಬೇಸತ್ತಿರುವ ಸಹಪ್ರಯಾಣಿಕರೂ ಸಹ ಆಡಂನನ್ನು ಬೆಂಬಲಿಸಿದಂತೆ ಈ ವಿಡಿಯೋದಲ್ಲಿ ಕಂಡುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...