ಹುಡುಗಿಯರಿಗೆ ಮದುವೆಯಾಗಲು ಕನಿಷ್ಠ ವಯೋಮಾನದ ಅರ್ಹತೆಯನ್ನು 21 ವರ್ಷಕ್ಕೇರಿಸಲು ಕೇಂದ್ರ ಸಂಪುಟ ಅಸ್ತು ಎಂದಿರುವ ಬೆನ್ನಿಗೇ ಈ ವಿಚಾರವಾಗಿ ದೇಶಾದ್ಯಂತ ಪರ-ವಿರೋಧಗಳ ಚರ್ಚೆಗಳು ಕೇಳಿ ಬರುತ್ತಿವೆ.
ಕೇಂದ್ರದ ನಡೆಯನ್ನು ವಿರೋಧಿಸಿರುವ ಸಮಾಜವಾದಿ ಪಾರ್ಟಿಯ ಸಂಸದ ಎಸ್.ಟಿ. ಹಸನ್, ಹುಡುಗಿಯರು 16ನೇ ವಯಸ್ಸಿಗೆ ಮದುವೆಯಾಗುವುದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.
ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣವಿದೆ ಎಂದು ಹೇಳಿ ಬಿಜೆಪಿ ತೊರೆದ ಶಾಸಕಿ
“ಹುಡುಗಿಯರು ಫಲವತ್ತತೆಯ ವಯಸ್ಸಿಗೆ ಬಂದ ಕೂಡಲೇ ಮದುವೆಯಾಗಬೇಕು. ಪ್ರೌಢ ಹುಡುಗಿಯೊಬ್ಬಳು 16ನೇ ವಯಸ್ಸಿಗೆ ಮದುವೆಯಾಗುವುದು ತಪ್ಪೇನಿಲ್ಲ. ಹುಡುಗಿಯೊಬ್ಬಳು 18ನೇ ವಯಸ್ಸಿಗೆ ಮತದಾನ ಮಾಡಬಹುದಾದರೆ ಮದುವೆ ಏಕಾಗಬಾರದು?” ಎಂದು ಹಸನ್ ಕೇಳಿದ್ದಾರೆ.