ಅಮೆರಿಕ ಮೂಲದ ಹೆಲಿಕಾಪ್ಟರ್ ಸೇವಾ ಸಂಸ್ಥೆ ಬ್ಲೇಡ್ನ ಭಾರತೀಯ ಘಟಕವು ಬೆಂಗಳೂರು-ಕೊಡಗು ಮತ್ತು ಬೆಂಗಳೂರು-ಕಬಿನಿ ಮಾರ್ಗಗಳಲ್ಲಿ ಹೆಲಿಕಾಪ್ಟರ್ ಸೇವೆಗೆ ಚಾಲನೆ ನೀಡಿದೆ.
ಡಿಸೆಂಬರ್ 2020ರಂದು ರಾಜ್ಯದಲ್ಲಿ ಮೊದಲ ಬಾರಿಗೆ ಕಾಲಿಟ್ಟ ಬ್ಲೇಡ್ ವಾರಾಂತ್ಯದಲ್ಲಿ ಚಾರ್ಟಡ್ ಸೇವೆಗಳನ್ನು ಒದಗಿಸುತ್ತಿತ್ತು.
ಮೇಲ್ಕಂಡ ಮಾರ್ಗಗಳಲ್ಲಿ ಸೇವೆಗಳನ್ನು ಆರಂಭಿಸುವ ಮೂಲಕ ರಾಜಧಾನಿಯಿಂದ ಪ್ರವಾಸಿ ತಾಣಗಳಿಗೆ ತಲುಪಲು ಬೇಕಾದ ಸಮಯದಲ್ಲಿ 6-7 ಗಂಟೆಗಳ ಇಳಿಕೆಯಾಗಲಿದೆ.
“ದೇಶದಲ್ಲೇ ಅತ್ಯಂತ ಸುಂದರವಾದ ಕೆಲವೊಂದು ತಾಣಗಳು ಕರ್ನಾಟಕದಲ್ಲಿವೆ. ಆದರೆ ಅವುಗಳನ್ನು ತಲುಪುವುದೇ ದೊಡ್ಡ ತಲೆನೋವು. ಜನರು ತಮ್ಮ ಹಾಲಿಡೇ ಎಂಜಾಯ್ ಮಾಡುವುದರಿಂದ 6-7 ಗಂಟೆಗಳನ್ನು ಪ್ರಯಾಣವೇ ಕಿತ್ತುಕೊಳ್ಳುತ್ತದೆ. ಬ್ಲೇಡ್ ಈ ನೋವಿಗೆ ಪರಿಹಾರ ಕೊಡಲಿದೆ,” ಎಂದು ಬ್ಲೇಡ್ ಇಂಡಿಯಾದ ಎಂಡಿ ಅಮಿತ್ ದತ್ತಾ ತಿಳಿಸಿದ್ದಾರೆ.