ವಂಚಕ ಸುಖೇಶ್ ಚಂದ್ರಶೇಖರ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ತನಿಖೆಗಳಲ್ಲಿ ಹೊರಬಿದ್ದಿರುವ ಅಂಶಗಳು ಇಡೀ ಬಾಲಿವುಡ್ ಲೋಕವನ್ನೇ ತಲ್ಲಣಗೊಳಿಸುವಂತಿದೆ.
ಕಳೆದ ವಾರವಷ್ಟೇ ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡಿದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಾನು ಸುಖೇಶ್ ಚಂದ್ರಶೇಖರ್ನಿಂದ 2 ಜೋಡಿ ವಜ್ರದ ಕಿವಿಯೋಲೆ, ಎರಡು ಬೆಲೆಬಾಳುವ ಬಳೆಗಳು, ಬೆಲೆ ಬಾಳುವ ಮೂರು ಬ್ಯಾಗ್ಗಳು ಸೇರಿದಂತೆ ಸಾಕಷ್ಟು ವಸ್ತುಗಳನ್ನು ಪಡೆದುಕೊಂಡಿದ್ದಾಗಿ ಹೇಳಿದ್ದರು.
ಆದರೆ ಜಾರಿ ನಿರ್ದೇಶನಾಲಯ ಇದೀಗ ಬಹಿರಂಗ ಪಡಿಸಿರುವ ಮಾಹಿತಿಯ ಪ್ರಕಾರ ಸುಖೇಶ್ ಕೇವಲ ಜಾಕ್ವೆಲಿನ್ ಮಾತ್ರವಲ್ಲದೇ ಬಾಲಿವುಡ್ನ ಹಲವಾರು ನಟಿಯರನ್ನು ಗುರಿಯಾಗಿಸಿಕೊಂಡಿದ್ದ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಬಾಲಿವುಡ್ ಗ್ಲಾಮರ್ ಲೋಕಕ್ಕೆ ಮರುಳಾಗಿ ಹೋಗಿದ್ದ ಸುಖೇಶ್ ಅನೇಕ ಪ್ರಸಿದ್ಧ ನಟಿಯರನ್ನೇ ಟಾರ್ಗೆಟ್ ಮಾಡಿದ್ದ ಎನ್ನಲಾಗಿದೆ. ತನ್ನ ಐಡೆಂಟಿಟಿಯನ್ನು ರಕ್ಷಿಸಿಕೊಳ್ಳುವ ಸಲುವಾಗಿ ಈತ ಬೆಲೆಬಾಳುವ ಉಡುಗೊರೆಗಳನ್ನು ಬೇರೆ ಬೇರೆ ಹೆಸರಿನಲ್ಲಿ ನಟಿಯರಿಗೆ ಕಳುಹಿಸುತ್ತಿದ್ದ ಎನ್ನಲಾಗಿದೆ.
ಸುಖೇಶ್ ಬಾಲಿವುಡ್ನ ಸಾಕಷ್ಟು ನಟಿಯರಿಗೆ ಬೆಲೆಬಾಳುವ ವಸ್ತುಗಳನ್ನೇ ಉಡುಗೊರೆಯಾಗಿ ನೀಡಿದ್ದಾನೆ. ಇವೆಲ್ಲವನ್ನು ಆತ ಬೇರೆ ಬೇರೆ ಹೆಸರುಗಳನ್ನು ಬಳಸಿ ಕಳುಹಿಸಿದ್ದಾನೆ. ಈತ ಬಾಲಿವುಡ್ ನಟಿಯರಿಗೆ ಬೆಡಗಿಗೆ ಬಹುಬೇಗನೆ ಮಾರುಹೋಗುವವನಾಗಿದ್ದ.
ಜಾಕ್ವೆಲಿನ್ರನ್ನು ಬಲೆಗೆ ಬೀಳಿಸುವ ಮುನ್ನ ಈತ ಬೇರೆ ನಟಿಯರನ್ನು ಬಲೆಗೆ ಬೀಳಿಸಲು ಯತ್ನಿಸಿದ್ದ. ಆದರೆ ಯಾವೊಬ್ಬ ಪ್ರಸಿದ್ಧ ನಟಿಯೂ ಈತನಿಗೆ ಮಾರುಹೋಗಲಿಲ್ಲ ಹಾಗೂ ಈತನ ಬೆಲೆಬಾಳುವ ಉಡುಗೊರೆಗಳ ಆಮಿಷಕ್ಕೂ ಒಳಗಾಗಿಲ್ಲ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ.
ಸುಖೇಶ್ ವಂಚನೆ ಬೆಳಕಿಗೆ ಬಂದ ಬಳಿಕ ಅನೇಕ ನಟಿಯರು ತಮಗೆ ಬಂದ ಐಷಾರಾಮಿ ಉಡುಗೊರೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ ಎಲ್ಲ ನಟಿಯರ ಬಳಿಯೂ ಈತ ಬೇರೆ ಬೇರೆ ಹೆಸರನ್ನು ಹೇಳಿದ್ದಾನೆ.
ಉದಾಹರಣೆಗೆ ಜಾಕ್ವೆಲಿನ್ ಫರ್ನಾಂಡೀಸ್ ಬಳಿಯಲ್ಲಿ ಈತ ಶೇಖರ್ ರತ್ನವೇಲಾ ಎಂದು ಪರಿಚಯ ಮಾಡಿಕೊಂಡಿದ್ದ ಎನ್ನಲಾಗಿದೆ.