alex Certify ಪರೀಕ್ಷಾ ನಿಯಮದಲ್ಲಿ ಮತ್ತೊಮ್ಮೆ ಬದಲಾವಣೆ ತಂದ ಸಿಬಿಎಸ್‌ಇ: ಮಂಡಳಿ ಪರೀಕ್ಷೆಯ ಓಎಂಆರ್‌ ಪುಟಗಳು ಡಿಜಿಟಲ್ ಮೌಲ್ಯಮಾಪನಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರೀಕ್ಷಾ ನಿಯಮದಲ್ಲಿ ಮತ್ತೊಮ್ಮೆ ಬದಲಾವಣೆ ತಂದ ಸಿಬಿಎಸ್‌ಇ: ಮಂಡಳಿ ಪರೀಕ್ಷೆಯ ಓಎಂಆರ್‌ ಪುಟಗಳು ಡಿಜಿಟಲ್ ಮೌಲ್ಯಮಾಪನಕ್ಕೆ

ಮಂಡಳಿ ಪರೀಕ್ಷೆಯ ಟರ್ಮ್ 1 ಹಂತ ಚಾಲ್ತಿಯಲ್ಲಿರುವ ನಡುವೆಯೇ, ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತಂದಿದೆ. ಶಾಲಾ ಕೇಂದ್ರಗಳಲ್ಲಿ ನಡೆಸುತ್ತಿದ್ದ ದೈಹಿಕ ಮೌಲ್ಯಮಾಪನಕ್ಕೆ ತೆರೆ ಎಳೆಯಲು ನಿರ್ಧರಿಸಿರುವ ಸಿಬಿಎಸ್‌ಇ, ಓಎಂಆರ್‌‌ ಶೀಟ್‌ಗಳನ್ನು ಪರಿಚಯಿಸಲು ಮುಂದಾಗಿತ್ತು.

ಪರೀಕ್ಷೆಯ ದಿನದಂದೇ ಓಎಂಆರ್‌ ಪುಟಗಳನ್ನು ಆಂತರಿಕ ಹಾಗೂ ಬಾಹ್ಯ ಮೌಲ್ಯಮಾಪಕರಿಬ್ಬರಿಂದಲೂ ಪರಿಶೀಲನೆ ಮಾಡಿಕೊಳ್ಳಲು ಅನುಮೋದಿತ ಶಾಲೆಗಳಿಗೆ ಈ ಹಿಂದೆ ಸಿಬಿಎಸ್‌ಇ ಸೂಚನೆ ನೀಡಿತ್ತು. ಇದೇ ಓಎಂಆರ್‌ ಪುಟಗಳನ್ನು ನಂತರದ ಹಂತದಲ್ಲಿ ಡಿಜಿಟಲ್‌ ಆಗಿ ಪರಿಶೀಲನೆ ಮಾಡಲಾಗುವುದು.

ಗುರುವಾರದಿಂದ ಆಚೆಗೆ ದೈಹಿಕ ಮೌಲ್ಯಮಾಪನಕ್ಕೆ ಮುಂದಾಗದಂತೆ ಶಾಲೆಗಳಿಗೆ ಸೂಚನೆ ನೀಡಿದ ಸಿಬಿಎಸ್‌ಇ, ಶಾಲೆಗಳಿಗೆ ಕಳುಹಿಸಿದ ಪತ್ರಗಳ ಮುಖಾಂತರ, ಓಎಂಆರ್‌ ಪುಟಗಳನ್ನು, ಪರೀಕ್ಷೆ ಮುಗಿದ 15 ನಿಮಿಷಗಳ ಒಳಗೆ ವೀಕ್ಷಕರ ಸಮ್ಮುಖದಲ್ಲಿ ಪ್ಯಾಕ್ ಮಾಡಿ ಸೀಲ್ ಮಾಡಲು ತಿಳಿಸಿದೆ. ಸೀಲ್ ಆದ ಓಎಂಆರ್‌ ಪುಟಗಳನ್ನು ಮಂಡಳಿಯ ಪ್ರಾದೇಶಿಕ ಕಚೇರಿಗಳಿಗೆ ರವಾನೆ ಮಾಡಲಾಗುವುದು ಎಂದು ಪತ್ರದಲ್ಲಿ ಸಿಬಿಎಸ್‌ಇ ತಿಳಿಸಿದೆ.

ಒಲಿಂಪಿಕ್ಸ್ ಚಿನ್ನದ ಪದಕ ವಿಜೇತನಿಂದ ನಾಚಿಕೆಗೇಡಿನ ಕೃತ್ಯ, ತರಬೇತುದಾರನ ಪುತ್ರಿಯೊಂದಿಗೆ ಲೈಂಗಿಕ ಕ್ರಿಯೆ

ಮಧ್ಯಂತರ ಪರೀಕ್ಷೆಗಳ ನಡುವೆಯೇ ಹೀಗೆ ನಿಯಮಗಳಲ್ಲಿ ಬದಲಾವಣೆ ತರುತ್ತಿರುವ ಸಿಬಿಎಸ್‌ಇ, ಈ ಮುನ್ನ ವಿದ್ಯಾರ್ಥಿಗಳ ಓಎಂಆರ್‌ ಪುಟಗಳನ್ನು ಆಯಾ ಶಾಲೆಗಳಲ್ಲೇ ಮೌಲ್ಯಮಾಪನ ಮಾಡಲು ಅನುಮತಿ ನೀಡಿ, ಇದೀಗ ಇದೇ ಓಎಂಆರ್‌ ಪುಟಗಳನ್ನು ಬಾಹ್ಯ ಮೌಲ್ಯಮಾಪಕರಿಂದ ಮೌಲ್ಯಮಾಪನ ಮಾಡಬೇಕೆಂದು ಸೂಚನೆ ನೀಡಿದೆ.

ದೇಶಾದ್ಯಂತ ಸಾವಿರಾರು ಶಾಲೆಗಳಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಸಿಬಿಎಸ್‌ಇ, ಪರೀಕ್ಷೆಗಳನ್ನು ನ್ಯಾಯಸಮ್ಮತವಾಗಿ ಹಾಗೂ ಸುಗಮವಾಗಿ ನಡೆಸುವ ಜವಾಬ್ದಾರಿ ಕೇಂದ್ರ ಮೇಲ್ವಿಚಾರಕರದ್ದು ಎಂದಿದೆ. ಪರೀಕ್ಷೆಗಳನ್ನು ಆಯೋಜಿಸುವ ವೇಳೆ ಏನಾದರೂ ಪ್ರಮಾದಗಳನ್ನು ಎಸಗಿದಲ್ಲಿ ಅಂಥ ಶಾಲೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಸಿಬಿಎಸ್‌ಇ ಎಚ್ಚರಿಕೆ ನೀಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...