ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಬಹು ಆಯ್ಕೆ ಪ್ರಶ್ನೆ ಪದ್ಧತಿಯಲ್ಲಿ ನಡೆಸಲಾಗಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಈ ಶೈಕ್ಷಣಿಕ ವರ್ಷದಿಂದ ಮೊದಲಿನಂತೆಯೇ ವಿವರವಾಗಿ ಉತ್ತರ ಬರೆಯುವ ರೀತಿಯಲ್ಲಿ ನಡೆಸಲಾಗುತ್ತದೆ.
ಸಂಪೂರ್ಣ ಬಹು ಆಯ್ಕೆ ಪ್ರಶ್ನೆ ಪದ್ಧತಿ ಕೈಬಿಟ್ಟು ವಿವರವಾಗಿ ಉತ್ತರ ಬರೆಯುವ ಪದ್ಧತಿ ಜಾರಿಗೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತೀರ್ಮಾನಿಸಿದೆ. 2021 ರಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಬಹು ಆಯ್ಕೆ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗಿತ್ತು. ವಿಷಯದ ವಿಶ್ಲೇಷಣೆ ನಡೆಸಲು ವಿವರವಾದ ಉತ್ತರ ಬರೆಯುವುದು ಅನುಕೂಲ. ಪ್ರಥಮ ಭಾಷೆಗೆ 125 ಅಂಕ, ಉಳಿದವು 20 ಆಂತರಿಕ ಅಂಕ ಸೇರಿ 100 ಅಂಕಗಳಿಗೆ ಪರೀಕ್ಷೆ ನಡೆಯಲಿದೆ ಎನ್ನಲಾಗಿದೆ.