ಬಹಳಷ್ಟು ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಬೋನಸ್ ಹಾಗೂ ಹೆಚ್ಚುವರಿ ಪಾವತಿಗಳನ್ನು ಕೊಡುತ್ತವೆ. ಆದರೆ ಫ್ಲಾರಿಡಾ ಮೂಲದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಪ್ರೋತ್ಸಾಹದ ರೂಪದಲ್ಲಿ ಹೊಸ ಐಡಿಯಾ ಹೊರತಂದಿದೆ.
ಹೊಸ ನಿರ್ಮಾಣ ಕಾಮಗಾರಿಗಳಿಗೆ ಏರ್ ಕಂಡೀಷನಿಂಗ್ ಮತ್ತು ಪ್ಲಂಬಿಂಗ್ ಸವಲತ್ತುಗಳನ್ನು ಒದಗಿಸುವ ಮೆಕ್ಯಾನಿಕಲ್ ಒನ್, ಇದೀಗ ಎರಡು ಹೊಸ ಹಾಗೂ ಮುಟ್ಟುಗೋಲು-ಮುಕ್ತ ಮನೆಗಳನ್ನು ತನ್ನ ಉದ್ಯೋಗಿಗಳಿಗೆ ಆಫರ್ ಮಾಡುತ್ತಿದೆ. ತನ್ಮೂಲಕ ತನ್ನ ಉದ್ಯೋಗಿಗಳಿಗೆ ಉಚಿತವಾಗಿ ಎರಡು ಮನೆಗಳನ್ನು ನೀಡುವ ಆಫರ್ ಅನ್ನು ಕಂಪನಿ ಮುಂದಿಟ್ಟಿದೆ.
ದಿಢೀರ್ ಬೆಳವಣಿಗೆ: ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಭಾಗಿಯಾದ ಸಚಿವನ ತಲೆದಂಡ, ರಾಜೀನಾಮೆ ಅಂಗೀಕರಿಸಿದ ಗೋವಾ ಸಿಎಂ
ಈ ಸಂಬಂಧ ಪ್ರಕ್ರಿಯೆಯನ್ನು ಮುಂದಿನ ವರ್ಷದ ಡಿಸೆಂಬರ್‌ನಲ್ಲಿ ನಡೆಸಲಾಗುವುದು. ಇದಕ್ಕೆಂದೇ $500,000 (3.8 ಕೋಟಿ ರೂ.) ಬಜೆಟ್ ಅನ್ನು ಕಂಪನಿ ಎತ್ತಿಟ್ಟಿದ್ದು, ಮೂರು ಬೆಡ್ ರೂಂ , ಎರಡು ಬಾತ್ ರೂಂ ಇರುವ ಮನೆಗಳನ್ನು ಖರೀದಿ ಮಾಡಲು ಮುಂದಾಗಿದೆ.
ಈ ಕುರಿತು ಮಾತನಾಡಿದ ಕಂಪನಿಯ ಹಿರಿಯ ಅಧಿಕಾರಿ ಜೇಮ್ಸ್, “ಮೊದಲಿಗೆ ಉದ್ಯೋಗಿಗಳಿಗೆ ಕಾರು ನೀಡಲು ಯೋಚಿಸಿದ್ದೆವು. ಆದರೆ ಉದ್ಯೋಗಿಗಳು ತಮ್ಮ ಸ್ವಂತ ಮನೆ ಹೊಂದುವುದು ನನ್ನ ಆಸೆಯಾಗಿತ್ತು. ನಮ್ಮ ಬಹುತೇಕ ಉದ್ಯೋಗಿಗಳು ಬಾಡಿಗೆ ಮನೆಗಳಲ್ಲಿದ್ದಾರೆ. ಉದ್ಯೋಗಿಗಳ ಕೆಲಸ ಮೆಚ್ಚುವ ಹೊಸ ವಿಧವನ್ನು ಕಂಡುಕೊಳ್ಳುವುದು ನನ್ನ ಆಸೆ. ನಮ್ಮ ಜನರನ್ನು ನಾವು ಚೆನ್ನಾಗಿ ನೋಡಿಕೊಂಡರೆ, ಮಾರುಕಟ್ಟೆಯ ಯಾವುದೇ ಬಜೆಟ್‌ಗಿಂತಲೂ ಹೆಚ್ಚಾಗಿ ಅವರು ನಮಗಾಗಿ ಇನ್ನಷ್ಟು ಖುಷಿಯಿಂದ ಕೆಲಸ ಮಾಡಲಿದ್ದಾರೆ,” ಎಂದು ತಿಳಿಸಿದ್ದಾರೆ.
ಈ ಆಫರ್ ಪಡೆಯಲು ಅರ್ಹರಾಗಬೇಕಿದ್ದಲ್ಲಿ, ಉದ್ಯೋಗಿಗಳು ಈ ಕಂಪನಿಯಲ್ಲಿ ಕನಿಷ್ಠ ಒಂದು ವರ್ಷ ಕೆಲಸ ಮಾಡಿದ್ದು, ತಮ್ಮ ಇಚ್ಛೆಯ ಸಾಮುದಾಯಿಕ ಸೇವೆಯೊಂದರಲ್ಲಿ ಭಾಗಿಯಾಗಿರಬೇಕು ಎಂಬ ಷರತ್ತನ್ನು ಕಂಪನಿ ಮುಂದಿಟ್ಟಿದೆ.