ಬಹುಮುಖ ಪ್ರತಿಭೆ ಎಲಾನ್ ಮಸ್ಕ್ ಇಂಜಿನಿಯರಿಂಗ್, ಉದ್ಯಮಶೀಲತೆ ಹಾಗೂ ದತ್ತಿ ಕೆಲಸಗಳ ಮೂಲಕ ಜಗತ್ತಿನಾದ್ಯಂತ ಭಾರೀ ಫೇಮಸ್ ಆಗಿರುವ ವ್ಯಕ್ತಿ. ಬಹಳ ಕಡಿಮೆ ಮಾತನಾಡಿದರೂ ಸಹ ಮಸ್ಕ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಅಭಿಮಾನಿಗಳು ಹಾಗೂ ಫಾಲೋವರ್‌ಗಳ ಜೊತೆಗೆ ಟಚ್‌ನಲ್ಲಿರುತ್ತಾರೆ.
ಮಸ್ಕ್‌ರ ಮುಖ ನೆಟ್ಟಿಗರ ಸಮುದಾಯಕ್ಕಂತೂ ಚಿರಪರಿಚಿತ ಎಂದರೆ ತಪ್ಪಾಗಲಾರದು.
ಇದೀಗ ಟೆಸ್ಲಾ ಸಿಇಓರಂತೆಯೇ ಕಾಣುವ ಏಷ್ಯಾದ ವ್ಯಕ್ತಿಯೊಬ್ಬರು ಆನ್ಲೈನ್‌ನಲ್ಲಿ ಭಾರೀ ಫೇಮಸ್ ಆಗಿದ್ದಾರೆ. ಈ ವಿಡಿಯೋವನ್ನು ಚೀನಾದ ಡೌಯಿನ್‌ನಲ್ಲಿ ಶೇರ್ ಮಾಡಲಾಗಿದೆ. ಕರಿ ಕೋಟು ಧರಿಸಿ ಕರಿ ಕಾರಿನ ಪಕ್ಕ ನಿಂತಿರುವ ಈ ವ್ಯಕ್ತಿ ಈಗ ಭಾರೀ ಫೇಮಸ್ ಆಗಿದ್ದಾರೆ.
ಡೌಯಿನ್ ಬಳಕೆದಾರರು ಈತನನ್ನು ’ಯಿ ಲಾಂಗ್ ಮಸ್ಕ್’ ಎಂದು ಕರೆಯುವ ಮೂಲಕ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಲೇ, ಅನೇಕ ಮಂದಿ ನೆಟ್ಟಿಗರು, ಈ ವಿಡಿಯೋವನ್ನು ಎಡಿಟ್ ಮಾಡಿ, ವೈರಲ್ ಆಗಲಿ ಎಂಬ ಉದ್ದೇಶದಿಂದ ಮಸ್ಕ್‌ರ ಮುಖದಂತೆ ಆತನ ಮುಖವನ್ನು ಮಾಡಲಾಗಿದೆ ಎಂದಿದ್ದಾರೆ.
ವಿಡಿಯೋದಲ್ಲಿರುವ ಆ ವ್ಯಕ್ತಿ ಯಾರೆಂದು ಗುರುತು ಸಿಕ್ಕಿಲ್ಲದ ಕಾರಣ ಆತ ನಿಜಕ್ಕೂ ಮಸ್ಕ್ ತದ್ರೂಪಿಯೇ ಎಂದು ಖಾತ್ರಿ ಪಡಿಸಲು ಸಾಧ್ಯವಾಗಿಲ್ಲ ಎಂದು ವರದಿಗಳು ತಿಳಿಸಿವೆ.