ಸಾಗರದಾಳದಲ್ಲಿರುವ ಜೀವವೈವಿಧ್ಯವು ಸೃಷ್ಟಿಯ ವಿಸ್ಮಯಗಳ ಲೆಕ್ಕವಿಲ್ಲದಷ್ಟು ನಿದರ್ಶನಗಳನ್ನು ಒಳಗೊಂಡಿದೆ. ವೈಜ್ಞಾನಿಕವಾಗಿ ಅದೆಷ್ಟೇ ಮುಂದುವರೆದಿದ್ದರೂ ಸಹ ಮಾನವರಿಗೆ ಇನ್ನೂ ಅರ್ಥವೇ ಆಗಿರದಂಥ ಜೀವ ರಚನೆಗಳೆಲ್ಲಾ ಸಾಗರದಾಳದಲ್ಲಿವೆ.
ಭಾರೀ ತಲೆ ಇರುವ ಮೀನೊಂದರ ವಿಡಿಯೋವೊಂದು ವೈರಲ್ ಆಗಿದ್ದು, ಇಲ್ಲಿ ಮೀನಿನ ತಲೆಯು ಪಾರದರ್ಶಕವಾಗಿದೆ. ಮೀನಿನ ಕಣ್ಣುಗಳು ಹಸಿರಾಗಿದ್ದು, ಹಣೆಯಿಂದ ಹೊರಬಂದಂತೆ ಕಾಣುತ್ತವೆ.
ಕೋಲ್ಕತ್ತಾದ ದುರ್ಗಾ ಪೂಜೆಗೆ ವಿಶ್ವ ಸಂಸ್ಥೆಯ ಪಾರಂಪರಿಕ ಸ್ಥಾನಮಾನ
ವಿಚಿತ್ರವಾಗಿ ಕಾಣುವ ಈ ಜೀವಿಯು ಪೆಸಿಫಿಕ್ ಸಾಗರದ ಸಾವಿರಾರು ಅಡಿ ಆಳದಲ್ಲಿ ಕಂಡುಬಂದಿದೆ. ಬ್ಯಾರೆಲ್‌ಐ ಮೀನು ಎಂದು ಕರೆಯಲ್ಪಡುವ ಈ ಜೀವಿಯು ಇದುವರೆಗೆ ಆಳ ಸಾಗರದಲ್ಲಿ ಒಂಬತ್ತು ಬಾರಿ ಮಾತ್ರವೇ ಕಾಣಿಸಿಕೊಂಡಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಮೀನಿನ ಕಣ್ಣುಗಳು ಬೆಳಕಿಗೆ ಸೂಕ್ಷ್ಮ ಸಂವೇದನೆ ಹೊಂದಿದ್ದು, ಅವುಗಳು ತಲೆಯ ಮೇಲೆ, ನೇರವಾಗಿ ಕಂಡುಬರುತ್ತವೆ ಎಂದು ಸಂಶೋಧಕರು ತಿಳಿಸುತ್ತಾರೆ.
ಈ ಮೀನಿಗಾಗಿ ತನ್ನ ಸಿಬ್ಬಂದಿ 5,600ಕ್ಕೂ ಹೆಚ್ಚು ಬಾರಿ ಆಳ ಸಾಗರಕ್ಕೆ ಡೈವ್ ಮಾಡಿ, 27,600+ ಗಂಟೆಗಳ ವಿಡಿಯೋ ಮಾಡಿದರೂ ಅದು ಕಣ್ಣಿಗೆ ಕಂಡಿರುವುದು ಬರೀ 9 ಬಾರಿ ಮಾತ್ರ ಎಂದು ಎಂಬಿಎಆರ್‌ಐ ಟ್ವಿಟರ್‌ನಲ್ಲಿ ಹೇಳಿಕೊಂಡು, ವಿಡಿಯೋ ಪೋಸ್ಟ್ ಮಾಡಿದೆ.