ತಮ್ಮ ಪುಟಾಣಿ ಮಗಳ ಜೀವ ಉಳಿಸಿದ ಸಾಕುನಾಯಿಯ ಬಗ್ಗೆ ಮಹಿಳೆಯೊಬ್ಬರು ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ.
ಕೆಲ್ಲಿ ಆಂಡ್ರ್ಯೂ ಹೆಸರಿನ ಈಕೆ ಹೇಳಿರುವ ಪ್ರಕಾರ; ಹೆನ್ರಿ ಹೆಸರಿನ ತನ್ನ ಸಾಕುನಾಯಿ ತನ್ನ ಮಗಳಿದ್ದ ನರ್ಸರಿಯತ್ತ ತೆರಳಿ ಆಕೆಯನ್ನು ಎಬ್ಬಿಸಲು ಯತ್ನಿಸುತ್ತಿತ್ತು. ತನ್ನ ಮಗುವಿಗೆ ಜ್ವರ ಬಂದಿದ್ದು, ನಾಯಿಯಿಂದಾಗಿ ತಾನು ಬೇಸತ್ತಿರುವುದಾಗಿ ತಾಯಿ ಹೇಳಿದ್ದರು.
“ಕಳೆದ ರಾತ್ರಿ ನರ್ಸರಿಯೊಳಗೆ ಪದೇ ಪದೇ ಹೋಗುತ್ತಿದ್ದ ನಾಯಿ ಮಗುವನ್ನು ಎಬ್ಬಿಸುವ ಪ್ರಯತ್ನ ಮಾಡುತ್ತಿತ್ತು. ಆಕೆಗೆ ಹುಶಾರಿಲ್ಲ, ನನಗೆ ನಾಯಿಯ ಮೇಲೆ ಸಿಟ್ಟು ಬರುತ್ತಿತ್ತು. ಆಗ ಗಮನಿಸಿದ ವೇಳೆ ಮಗಳು ಉಸಿರಾಡುವುದು ಕ್ಷೀಣವಾಗುತ್ತಿತ್ತು” ಎಂದ ಆಂಡ್ರ್ಯೂ,” ಆ ಬಳಿಕ ನಾವು ಆಸ್ಪತ್ರೆಯಲ್ಲಿ ರಾತ್ರಿ ಕಳೆದೆವು. ಹೆನ್ರಿ ಮಗಳನ್ನು ಎಬ್ಬಿಸದೇ ಇದ್ದಿದ್ದರೆ ಹೀಗಾಗುತ್ತಿತ್ತೇ ಎಂಬುದು ನಮಗೆ ಗೊತ್ತಿಲ್ಲ. ನಾಯಿಗಳ ಪ್ರೀತಿಗೆ ನಾವು ಯೋಗ್ಯರಲ್ಲ,” ಎಂದು ಭಾವುಕವಾಗಿ ನುಡಿದಿದ್ದಾರೆ.
ನಾಯಿ ಕೊಟ್ಟ ಅಲರ್ಟ್ನಿಂದಾಗಿ ಆಂಡ್ರ್ಯೂ ತಮ್ಮ ಮಗಳನ್ನು ಕನೆಕ್ಟಿಕಟ್ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಕೆಯ ಜೀವ ಉಳಿಸಿಕೊಂಡಿದ್ದಾರೆ.