ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ರೈತರ ಮೇಲೆ ಹಲ್ಲೆ ನಡೆಸಿದ ಆರೋಪದ ಅಡಿಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಜೈಲುಪಾಲಾಗಿದ್ದಾರೆ.
ಪುತ್ರನ ಮೇಲೆ ಆರೋಪ ಕೇಳಿಬಂದಿರುವ ಬೆನ್ನಲ್ಲೇ ಅಜಯ್ ಮಿಶ್ರಾ ರಾಜೀನಾಮೆ ನೀಡುವಂತೆ ಕೂಗು ಹೆಚ್ಚಾಗುತ್ತಿದೆ. ಈ ನಡುವೆ ಪುತ್ರನ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತರೊಬ್ಬರ ಮೇಲೆ ಮುಗಿಬಿದ್ದ ಕೇಂದ್ರ ಸಚಿವ ಅಜಯ್ ಮಿಶ್ರಾ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇಂತಹ ಮೂರ್ಖತನದ ಪ್ರಶ್ನೆಗಳನ್ನು ನನ್ನ ಬಳಿ ಕೇಳಬೇಡಿ. ನಿನ್ನ ತಲೆ ಹಾಳಾಗಿದ್ಯಾ..? ಎಂದು ಪತ್ರಕರ್ತನಿಗೆ ಅಜಯ್ ಮಿಶ್ರಾ ನಿಂದಿಸಿದ್ದಾರೆ. ಪತ್ರಕರ್ತ, ಅಜಯ್ ಮಿಶ್ರಾ ಪುತ್ರ ಅಶಿಶ್ ಮಿಶ್ರಾ ವಿರುದ್ದ ನಡೆಯುತ್ತಿರುವ ತನಿಖೆ ಸಂಬಂಧ ಪ್ರಶ್ನೆ ಮಾಡಿದ್ದರು.
ಪ್ರಧಾನಿ ಮೋದಿ ಸಂಪುಟದ ಸಚಿವರಾಗಿರುವ ಅಜಯ್ ಮಿಶ್ರಾ ಪತ್ರಕರ್ತನ ಮೇಲೆ ಮುಗಿಬೀಳುತ್ತಾ ಮೈಕ್ ಬಂದ್ ಮಾಡು ಎಂದು ಪತ್ರಕರ್ತರಿಗೆ ಆವಾಜ್ ಹಾಕಿದ್ದಾರೆ. ಪತ್ರಕರ್ತರಿಗೆ ಕಳ್ಳರು ಎಂದು ನಿಂದಿಸುತ್ತಿರೋದು ಸಹ ವಿಡಿಯೋದಲ್ಲಿ ಸೆರೆಯಾಗಿದೆ.
ಲಖೀಂಪುರ ಖೇರಿಯಲ್ಲಿ ಆಕ್ಸಿಜನ್ ಪ್ಲಾಂಟ್ ಉದ್ಘಾಟನೆ ಸಚಿವ ಅಜಯ್ ಮಿಶ್ರಾ ಆಗಮಿಸಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ.