ಒಂದು ತಿಂಗಳ ಮದುವೆ ಆನಿವರ್ಸರಿಗೆ ಅಂದದ ಫೋಟೋ ಹಂಚಿಕೊಂಡ ರಾಜ್ಕುಮಾರ್ ರಾವ್ ದಂಪತಿ 16-12-2021 7:30AM IST / No Comments / Posted In: Featured News, Live News, Entertainment ಬಾಲಿವುಡ್ ನಟ ರಾಜ್ಕುಮಾರ್ ರಾವ್ ಮತ್ತು ನಟಿ ಪತ್ರಲೇಖಾ ವಿವಾಹವಾಗಿ ಒಂದು ತಿಂಗಳಾಗಿದೆ. 11 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಜೋಡಿ ಕಳೆದ ಒಂದು ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಪ್ರತಿದಿನ ತಮ್ಮ ಪ್ರೀತಿಯನ್ನು ಆಚರಿಸುವ ಈ ನೂತನ ದಂಪತಿ, ತಮ್ಮ ಮೊದಲ ತಿಂಗಳ ವಾರ್ಷಿಕೋತ್ಸವದಂದು ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ವಿಶ್ ಮಾಡಲು ತಮ್ಮ ಮದುವೆಯ ಕೆಲವು ಅಂದದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಮದುವೆಯಾದ ಒಂದು ತಿಂಗಳ ಆನಿವರ್ಸರಿ ದಿನ ತಮ್ಮಿಬ್ಬರ ಸಂತೋಷದ ಘಳಿಗೆಯ ಫೋಟೋವನ್ನು ಇವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಕಳೆದ ತಿಂಗಳು ವಿವಾಹದ ಫೋಟೋ ಹಂಚಿಕೊಂಡಿದ್ದ ನಟ ರಾಜ್ಕುಮಾರ್ ರಾವ್, ಅಂತಿಮವಾಗಿ 11 ವರ್ಷಗಳ ಪ್ರೀತಿ, ಪ್ರಣಯ, ಸ್ನೇಹ ಮತ್ತು ವಿನೋದದ ನಂತರ ತನ್ನದೆಲ್ಲವನ್ನೂ ಮದುವೆಯಾಗಿರುವುದಾಗಿ ಬರೆದಿದ್ದರು. ರಾಜ್ಕುಮಾರ್ ರಾವ್ ಹಾಗೂ ಪತ್ರಲೇಖಾರ ವಿವಾಹದ ಉಡುಪುಗಳನ್ನು ಸಬ್ಯಸಾಚಿ ಡಿಸೈನ್ ಮಾಡಿದ್ದರು. ಪತ್ರಲೇಖಾ ಮತ್ತು ರಾಜ್ಕುಮಾರ್ ಮದುವೆಯಾಗುವ ಮೊದಲು 11 ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. ಅವರು ಸಿಟಿಲೈಟ್ಸ್ ಚಿತ್ರದಲ್ಲಿ ಸಹ-ನಟರಾಗಿದ್ದರು. ನಟಿ ಪತ್ರಲೇಖಾ ಸಿಟಿಲೈಟ್ಸ್ ಸಿನಮಾ ಮೂಲಕ ರಾಜ್ಕುಮಾರ್ ರಾವ್ ಜೊತೆ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದರು. ನಟಿ ಪತ್ರಲೇಖಾ ಲವ್ ಗೇಮ್ಸ್, ಬದ್ನಾಮ್ ಗಲಿ ಮತ್ತು ನಾನು ಕಿ ಜಾನು ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ರಾಜ್ಕುಮಾರ್ ರಾವ್ ಲವ್ ಸೆಕ್ಸ್ ಔರ್ ಧೋಖಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ನಟ ಇತ್ತೀಚೆಗೆ ಹಮ್ ದೋ ಹಮಾರೆ ದೋ ಚಿತ್ರದಲ್ಲಿ ನಟಿಸಿದ್ದಾರೆ.