ರೋಟಿ ತಯಾರಿಸುವ ಮೇಕಿಂಗ್ ವಿಡಿಯೋಗಳಿಗಾಗಿ ವೈರಲ್ ಆದ ಪಾಕಿಸ್ತಾನದ ಸುಂದರ ಯುವತಿ ನೆನಪಿದೆಯೇ? ಇದೀಗ ಪಾಕಿಸ್ತಾನಿ ಯುವತಿಯ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಆಕೆಯ ಸುಂದರ ನಗು ಮತ್ತು ಸುಂದರವಾದ ಕಣ್ಣುಗಳಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಹೊಸ ವಿಡಿಯೋದಲ್ಲಿ, ಯುವತಿ ತರಕಾರಿ ಬೇಯಿಸುವುದನ್ನು ನೋಡಬಹುದು. ವೈರಲ್ ವಿಡಿಯೋ ಸುಮಾರು 8 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದ್ದು, ಇದನ್ನು ಇನ್ಸ್ಟಾಗ್ರಾಂನಲ್ಲಿ ಏಕಿಯಾ ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದೆ.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಯುವತಿಯು ಕಿತ್ತಳೆ ಬಣ್ಣ ಮತ್ತು ಕಪ್ಪು ಸಲ್ವಾರ್ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾಳೆ. ಆಕೆ ತರಕಾರಿ ಬೇಯಿಸುತ್ತಿರುವಾಗ ನಕ್ಕ ಸುಂದರ ಮುಗುಳ್ಳಗೆಗೆ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಸುಂದರ ಕಂಗಳ ಯುವತಿ ಮನೆಯ ಮೂಲೆಯಲ್ಲಿ ಕುಳಿತು ತರಕಾರಿಗಳನ್ನು ಮಡಕೆಯಲ್ಲಿ ಬೇಯಿಸುತ್ತಿದ್ದಾಳೆ.
ವಿಡಿಯೋದಲ್ಲಿರುವ ಕಣ್ಣಿನ ಹುಡುಗಿ ಪಾಕಿಸ್ತಾನದ ಅಮಿನಾ ರೆಯಾಜ್ ಎಂದು ಗುರುತಿಸಲಾಗಿದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕರಾಚಿಯ ಹೊರವಲಯದಲ್ಲಿ ವಾಸಿಸುತ್ತಿದ್ದು, ಅಲೆಮಾರಿಗಳ ಕುಟುಂಬದಿಂದ ಬಂದಿದ್ದಾಳೆ. ಆದರೆ, ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋಗಳನ್ನು ಅಪ್‌ಲೋಡ್ ಮಾಡುವುದು ಆಮಿನಾ ಅಲ್ಲ. ಆಕೆಯ ನೆರೆಹೊರೆಯ ಯುವಕ ಈ ವಿಡಿಯೊಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾನೆ. ಆಕೆಯ ರೊಟ್ಟಿಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಅವಳು ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾಳೆ.