alex Certify ಡೆಲ್ಟಾಗಿಂತ ವೇಗವಾಗಿ ಹರಡುತ್ತಿದೆ ಒಮಿಕ್ರಾನ್….! ಎಚ್ಚರಿಕೆ ನೀಡಿದ WHO | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೆಲ್ಟಾಗಿಂತ ವೇಗವಾಗಿ ಹರಡುತ್ತಿದೆ ಒಮಿಕ್ರಾನ್….! ಎಚ್ಚರಿಕೆ ನೀಡಿದ WHO

ಒಮಿಕ್ರಾನ್ ರೂಪಾಂತರ ವೇಗವಾಗಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ  ಎಚ್ಚರಿಸಿದೆ. ಡಬ್ಲ್ಯುಎಚ್ ಒ ಮುಖ್ಯಸ್ಥ ಟೆಡ್ರೊಸ್ ಎ ಘೆಬ್ರೆಯೆಸಸ್  77 ದೇಶಗಳಲ್ಲಿ ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ ಎಂದಿದ್ದಾರೆ. ಒಮಿಕ್ರಾನ್ ಈಗಾಗಲೇ ಅನೇಕ ದೇಶಗಳಿಗೆ ಹರಡಿದ್ದು, ಹಿಂದಿನ ರೂಪಾಂತರಕ್ಕಿಂತ ಹೆಚ್ಚು ವೇಗವಾಗಿ ಹರಡುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಒಮಿಕ್ರಾನ್ ಡೆಲ್ಟಾಗಿಂತ ಹೆಚ್ಚು ವೇಗವಾಗಿ ಹರಡಬಲ್ಲದು ಎಂದವರು ಹೇಳಿದ್ದಾರೆ. ಒಮಿಕ್ರಾನ್ ಕಾರಣದಿಂದಾಗಿ, ಡಚ್ ಪ್ರಾಥಮಿಕ ಶಾಲೆಗಳು ಶೀಘ್ರದಲ್ಲೇ ಬಾಗಿಲು ಮುಚ್ಚಲಿವೆ. ಯುರೋಪ್ ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಆಸ್ಪತ್ರೆಗಳಿಗೆ ಬರ್ತಿರುವ ರೋಗಿಗಳು ಹೆಚ್ಚಾಗಿದ್ದಾರೆ.

ಇನ್ನು ಮಂಗಳವಾರ ಭಾರತದ ರಾಜಧಾನಿ ದೆಹಲಿಯಲ್ಲಿ ಒಮಿಕ್ರಾನ್ ರೂಪಾಂತರದ ನಾಲ್ಕು ಹೊಸ ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರದಲ್ಲಿ ಈ ರೂಪಾಂತರದ ಎಂಟು ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ, ದೇಶದಲ್ಲಿ ಒಮಿಕ್ರಾನ್ ರೂಪಾಂತರಗಳ ಪ್ರಕರಣಗಳ ಸಂಖ್ಯೆ 61 ಕ್ಕೆ ಏರಿದೆ. ಇತ್ತೀಚಿಗೆ ವಿದೇಶದಿಂದ ವಾಪಸ್ ಬಂದವರಲ್ಲಿಯೇ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಒಮಿಕ್ರಾನ್ ನಿಯಂತ್ರಣಕ್ಕೆ ಈಗಾಗಲೇ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಮಾಸ್ಕ್ ಹಾಗೂ ಸ್ಯಾನಿಟೈಜರ್ ಬಳಕೆ ಹಾಗೂ ಲಸಿಕೆ ಇದಕ್ಕೆ ಮದ್ದು ಎಂದು ಸರ್ಕಾರ ಪದೇ ಪದೇ ಜನರನ್ನು ಜಾಗೃತಗೊಳಿಸುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...