ದೇಶದ ಪ್ರತಿಯೊಬ್ಬ ನಾಗರಿಕನಿಗೂ ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ ಎಂದು ಬಿಡಿಸಿ ಹೇಳಬೇಕಿಲ್ಲ. ಐದು ವರ್ಷದ ಒಳಗಿನ ಮಕ್ಕಳಿಗೂ ಆಧಾರ್ ಕಾರ್ಡ್ ನೀಡಲಾಗುತ್ತಿದ್ದು, ಇವುಗಳನ್ನು ಬಾಲ ಆಧಾರ್ ಕಾರ್ಡ್ ಎಂದು ಕರೆಯಲಾಗುತ್ತದೆ.
ಬಾಲ ಆಧಾರ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಕೊಂಚ ಭಿನ್ನವಾದ ಅರ್ಹತೆಗಳನ್ನು ಕೇಳಲಾಗುತ್ತದೆ. ಮಕ್ಕಳಿಗೆ ಆಧಾರ್ ಕಾರ್ಡ್ ವಿತರಿಸುವ ಕ್ರಿಯೆಯಲ್ಲಿ ಒಂದಷ್ಟು ಬದಲಾವಣೆಗಳನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತಂದಿದೆ.
ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ: ಮಾನವ ಕಳ್ಳಸಾಗಣೆ ಜಾಲ ಪತ್ತೆ…?
ಮಗು ಜನಿಸಿದ ಆಸ್ಪತ್ರೆಯಲ್ಲಿ ವಿತರಿಸಲಾಗುವ ಜನನ ಪ್ರಮಾಣ ಪತ್ರ ಅಥವಾ ಚೀಟಿಯನ್ನು ಸಲ್ಲಿಸುವ ಮೂಲಕ ಮಕ್ಕಳಿಗೆ ಆಧಾರ್ ಕಾರ್ಡ್ಗಳನ್ನು ಪಡೆಯಬಹುದಾಗಿದೆ.
ಮಕ್ಕಳ ಆಧಾರ್ ಕಾರ್ಡ್ಗೆ ಅವರ ಬೆರಳಚ್ಚುಗಳು, ರೆಟಿನಾ ವಿವರಗಳನ್ನು ಕೊಡುವ ಅಗತ್ಯವಿಲ್ಲ. ಮಕ್ಕಳಿಗೆ ಐದು ವರ್ಷ ತುಂಬಿದ ಬಳಿಕ ಮಾತ್ರವೇ ಅವರ ಬಯೋಮೆಟ್ರಿಕ್ಸ್ ಮಾಹಿತಿಗಳು ಬೇಕಾಗುತ್ತವೆ. ಇದಾದ ಬಳಿಕ ಮಾತ್ರವೇ ಬಾಲ ಆಧಾರ್ ಕಾರ್ಡ್ ವಿತರಿಸಲಾಗುತ್ತದೆ.
ಬಾಲ ಆಧಾರ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ ?
* ಮೊದಲಿಗೆ, ಯುಐಡಿಎಐ ಜಾಲತಾಣಕ್ಕೆ ಭೇಟಿ ನೀಡಿ.
* ಆಧಾರ್ ಕಾರ್ಡ್ ನೋಂದಣಿ ಆಯ್ಕೆ ಮಾಡಿ, ಮಗುವಿನ ವಿವರಗಳನ್ನು ಭರ್ತಿ ಮಾಡಿ.
* ನಿಮ್ಮ ವಿಳಾಸ, ವಾಸಿಸುವ ಪ್ರದೇಶ, ರಾಜ್ಯ ಹೀಗೆ ಕೆಲವೊಂದು ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ.
* ಆಧಾರ್ ಕಾರ್ಡ್ ನೋಂದಣಿಗೆ ಅಪಾಯಿಂಟ್ಮೆಂಟ್ ಪಡೆಯಲು Appointment ಆಯ್ಕೆ ಹೋಗಿ.
*ನಿಮ್ಮ ಹತ್ತಿರದ ನೋಂದಣಿ ಕೇಂದ್ರವನ್ನು ಆಯ್ದುಕೊಂಡು, ಅಪಾಂಯಿಂಟ್ಮೆಂಟ್ ಪಡೆದು, ನಿಗದಿತ ದಿನಾಂಕದಂದು ನಿಮ್ಮ ಮಗುವಿನ ಆಧಾರ್ ಸ್ವೀಕರಿಸಿ.