alex Certify ಫೈಟ್ ಮಾಡಿ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡ ರಾಜಕಾರಣಿಗಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೈಟ್ ಮಾಡಿ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡ ರಾಜಕಾರಣಿಗಳು..!

ರಾಜಕೀಯದಲ್ಲಿ ನಾಯಕರು ಮತ್ತು ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಸಾಮಾನ್ಯವಾಗಿ ಗುಂಪು ಮಾತುಕತೆ ಮತ್ತು ಸಂವಾದಗಳ ಮೂಲಕ ಪರಿಹರಿಸಲಾಗುತ್ತದೆ. ಆದರೆ, ತಮ್ಮ ಪ್ರತಿಸ್ಪರ್ಧಿಗಳೊಂದಿಗೆ ರಾಜಕಾರಣಿಗಳು ದೈಹಿಕ ಹೋರಾಟದಲ್ಲಿ ತೊಡಗುವುದಿಲ್ಲ. ಆದರೆ, ಬ್ರೆಜಿಲ್ ನಲ್ಲಿ ನಡೆದಿರೋ ವಿಚಾರ ಕೇಳಿದ್ರೆ ಅಚ್ಚರಿ ಪಡ್ತೀರಾ..!

ಹೌದು, ಬ್ರೆಜಿಲ್ ನ ಇಬ್ಬರು ರಾಜಕಾರಣಿಗಳು ಮೂರು ಸುತ್ತಿನ ಎಂಎಂಎ ಹೋರಾಟದಲ್ಲಿ ಪರಸ್ಪರ ಸೋಲಿಸುವ ಮೂಲಕ ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ನಿರ್ಧರಿಸಿದ್ದರು.

ಬೋರ್ಬಾ ನಗರದ ಮೇಯರ್ ಸಿಮಾವೊ ಪೀಕ್ಸೊಟೊ ಹಾಗೂ ಮಾಜಿ ಕೌನ್ಸಿಲರ್ ಎರಿನ್ಯು ಆಳ್ವಾಸ್ ಡಾ ಸಿಲ್ವಾ ಅವರೊಂದಿಗೆ ಬಹಿರಂಗವಾಗಿ ಫೈಟಿಂಗ್ ಮಾಡಿದ್ದಾರೆ. ಇದನ್ನು ವೀಕ್ಷಿಸಲು ನೂರಾರು ಜನರು ಸೇರಿದ್ದರು. ಪಂದ್ಯದಲ್ಲಿ ಮೇಯರ್ ಸಿಮಾವೊ ಅವರು ವಿಜೇತರೆಂದು ಘೋಷಿಸಲಾಗಿದೆ.

ರೆಫರಿಯ ಸಮ್ಮುಖದಲ್ಲಿ ರಾಜಕಾರಣಿಗಳು ಪರಸ್ಪರರ ಮೇಲೆ ಬಲವಾದ ಹೊಡೆತಗಳು ಮತ್ತು ಒದೆಗಳನ್ನು ನೀಡಿದ್ದಾರೆ. ಈ ವೇಳೆ ಪ್ರೇಕ್ಷಕರು ಕೂಡ ಹರ್ಷೋದ್ಗಾರ ಮಾಡಿದ್ದಾರೆ. ಹೋರಾಟವು 13 ನಿಮಿಷಗಳ ಕಾಲ ನಡೆದಿದೆ. ಹಾಗೂ ಪೀಕ್ಸೊಟೊ ತಂಡದಿಂದ ಈ ಪಂದ್ಯವನ್ನು ಲೈವ್-ಸ್ಟ್ರೀಮ್ ಕೂಡ ಮಾಡಲಾಗಿದೆ. ಪಂದ್ಯದ ಟಿಕೆಟ್‌ಗಳನ್ನು 100 ಡಾಲರ್ ಗೆ ಮಾರಾಟ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈ ಇಬ್ಬರು ರಾಜಕಾರಣಿಗಳು ಜಗಳವಾಡಲು ಕಾರಣವೇನು?

ವರದಿಗಳ ಪ್ರಕಾರ, ಬೋರ್ಬಾ ನಗರದಲ್ಲಿನ ವಾಟರ್ ಪಾರ್ಕ್‌ನ ನಿರ್ವಹಣೆಯನ್ನು ಮಾಜಿ ಕೌನ್ಸಿಲರ್ ಸಿಲ್ವಾ ಟೀಕಿಸಿದ್ದರು. ಇದಕ್ಕಾಗಿ ಹೋರಾಟ ಕೂಡ ಮಾಡಿದ್ದಾರೆ. ಫೇಸ್ಬುಕ್ ನಲ್ಲೂ ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ, ಮೇಯರ್ ಪೀಕ್ಸೊಟೊ ಇದಕ್ಕೆ ಕ್ಯಾರೆ ಎಂದಿಲ್ಲ. ವಿಡಿಯೋಗೆ ತನ್ನದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು.

ಅಲ್ಲದೆ ಮೇಯರ್ ಪ್ರತಿ ಸವಾಲೆಸೆದಿದ್ದರು. ಆತ ನಿಜವಾಗಿಯೂ ಹೋರಾಡಲು ಬಯಸಿದರೆ, ನಾವು ಹೋರಾಡಲು ಸಿದ್ಧವಿರುವುದಾಗಿ ಹೇಳಿದ್ದರು. ಇದೀಗ ನಡೆದಿರುವ ಹೋರಾಟದ ವಿಡಿಯೋ ಭಾರಿ ವೈರಲ್ ಆಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...