alex Certify ಪರಿಷತ್ ತೀರ್ಪು: ಇಲ್ಲಿದೆ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರಿಷತ್ ತೀರ್ಪು: ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ವಿಧಾನ ಪರಿಷತ್ ನ 25 ಸ್ಥಾನಗಳಿಗೆ ನಡೆದಿದ್ದ ಚುನಾವಣಾ ಫಲಿತಾಂಶ ಸಂಪೂರ್ಣ ಪ್ರಕಟವಾಗಿದೆ. ಬಿಜೆಪಿ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ ಕಾಂಗ್ರೆಸ್ 11, ಜೆಡಿಎಸ್ 1 ಹಾಗೂ ಪಕ್ಷೇತರ ಅಭ್ಯರ್ಥಿ 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.

ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಕೇವಲ 6 ಸ್ಥಾನಗಳಲ್ಲಿ ಮಾತ್ರ ಸ್ಪರ್ದಿಸಿತ್ತು ಇದರಲ್ಲಿ ಹಾಸನದಲ್ಲಿ ಮಾತ್ರ ಜೆಡಿಎಸ್ ಗೆಲುವು ಪಡೆದಿದೆ. ಪರಿಷತ್ ಚುನಾವಣೆಯಲ್ಲಿ ಯಾವ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ

ಬಿಜೆಪಿ 12 ಸ್ಥಾನ:

ಬೆಂಗಳೂರು ನಗರದಲ್ಲಿ ಹೆಚ್.ಎಸ್.ಗೋಪಿನಾಥ್ ರೆಡ್ಡಿ, ಕೊಡಗು – ಸುಜಾ ಕುಶಾಲಪ್ಪ, ದಕ್ಷಿಣ ಕನ್ನಡ-ಉಡುಪಿ ಕೋಟಾ ಶ್ರೀನಿವಾಸ ಪೂಜಾರಿ, ಚಿಕ್ಕಮಗಳೂರು- ಎಂ.ಕೆ.ಪ್ರಾಣೇಶ್, ಶಿವಮೊಗ್ಗ – ಡಿ.ಎಸ್.ಅರುಣ್, ಚಿತ್ರದುರ್ಗ – ಕೆ ಎಸ್ ನವೀನ್, ಬಳ್ಳಾರಿ – ವೈ ಎಂ ಸತೀಶ್, ಉತ್ತರ ಕನ್ನಡ ಗಣಪತಿ ಉಳ್ವೇಕರ್, ಕಲಬುರ್ಗಿ-ಯಾದಗಿರಿ ಬಿ.ಜಿ.ಪಾಟೀಲ್, ಹುಬ್ಬಳ್ಳಿ-ಧಾರವಾಡ ಪ್ರದೀಪ್ ಶೆಟ್ಟರ್, ವಿಜಯಪುರ-ಬಾಗಲಕೋಟೆ ಪಿ.ಹೆಚ್.ಪೂಜಾರ್, ಮೈಸೂರು-ಚಾಮರಾಜನಗರ ರಘು ಕೌಟಿಲ್ಯ ಗೆಲುವು ಸಾಧಿಸಿದ್ದಾರೆ .

ಕಾಂಗ್ರೆಸ್ 11 ಸ್ಥಾನ:

ಬೀದರ್ -ಭೀಮ್ ರಾವ್ ಪಾಟೀಲ್, ಹುಬ್ಬಳ್ಳಿ-ಧಾರವಾಡ- ಸಲೀಂ ಅಹ್ಮದ್, ತುಮಕೂರು – ರಾಜೇಂದ್ರ, ಕೋಲಾರ- ಎಂ.ಎಲ್.ಅನಿಲ್ ಕುಮಾರ್, ವಿಜಯಪುರ-ಬಾಗಲಕೋಟೆ- ಸುನೀಲ್ ಗೌಡ ಪಾಟೀಲ್, ರಾಯಚೂರು-ಕೊಪ್ಪಳ – ಶರಣಗೌಡ ಪಾಟೀಲ್ ಬಯ್ಯಾಪುರ, ಮಂಡ್ಯ-ದಿನೇಶ್ ಗೂಳಿಗೌಡ, ಮೈಸೂರು-ಚಾಮರಾಜನಗರ-ಡಿ.ತಿಮ್ಮಯ್ಯ, ಉಡುಪಿ-ದಕ್ಷಿಣ ಕನ್ನಡ – ಮಂಜುನಾಥ್ ಭಂದಾರಿ, ಬೆಳಗವೈ-ಚಿಕ್ಕೋಡಿ ಚನ್ನರಾಜ ಹಟ್ಟಿಹೊಳಿ, ಬೆಂಗಳೂರು ಗ್ರಾಮಾಂತರ – ಎಸ್.ರವಿ

ಜೆಡಿಎಸ್ -1 ಸ್ಥಾನ

ಹಾಸನ – ಸೂರಜ್ ರೇವಣ್ಣ

ಪಕ್ಷೇತರ – 1 ಸ್ಥಾನ

ಬೆಳಗಾವಿ-ಚಿಕ್ಕೋಡಿ – ಲಖನ್ ಜಾರಕಿಹೊಳಿ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...