ಬೆಂಗಳೂರು : ನೋ ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆಯಾಗುವ ವಾಹನವನ್ನು ಕೊಂಡೊಯ್ಯುವ ಟೋಯಿಂಗ್ ವಾಹನವೇ ಸಿಗ್ನಲ್ ಜಂಪ್ ಮಾಡಿರುವ ಘಟನೆ ಬೆಂಗಳೂರಿನ ಚಾಲುಕ್ಯ ಸರ್ಕಲ್ ನಲ್ಲಿ ನಡೆದಿದೆ.
ಟೋಯಿಂಗ್ ವಾಹನವನ್ನು ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದು ಅಲ್ಲದೇ ಬಳಿಕ ಸಿಗ್ನಲ್ ಜಂಪ್ ಮಾಡಿ ಚಾಲಕ ವಾಹನ ಚಲಾಯಿಸಿದ್ದ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಟೋಯಿಂಗ್ ವಾಹನಕ್ಕೆ ದಂಡ ವಿಧಿಸಲಾಗಿದೆ.
ಟೋಯಿಂಗ್ ವಾಹನ ನೋ ಪಾರ್ಕಿಂಗ್ ನಲ್ಲಿ ನಿಂತಿದ್ದು, ಸಿಗ್ನಲ್ ಜಂಪ್ ಮಾಡಿರುವ ಘಟನೆಯನ್ನು ಕೆಲವರು ವಿಡಿಯೋ ಮಾಡಿ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಹೈಗ್ರೌಂಡ್ ಟ್ರಾಫಿಕ್ ಪೊಲೀಸರು ಇದೀಗ ಟೋಯಿಂಗ್ ವಾಹನ ಚಾಲಕನಿಗೆ ದಂಡ ವಿಧಿಸಿದ್ದಾರೆ.