ಏಕದಿನ ಕ್ರಿಕೆಟ್ ತಂಡದಿಂದ ಕೊಹ್ಲಿ ಕೆಳಗಿಳಿದಿದ್ದಾರೆ. ಕೊಹ್ಲಿ ನಾಯಕತ್ವದಿಂದ ಇಳಿದ ನಂತ್ರ ಈ ಜವಾಬ್ದಾರಿ ರೋಹಿತ್ ಶರ್ಮಾ ಹೆಗಲೇರಿದೆ. ಬಿಸಿಸಿಐ ಈ ನಿರ್ಧಾರದಿಂದ ಕೊಹ್ಲಿ ಇನ್ನೂ ಮುನಿಸಿಕೊಂಡಂತಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುವ ಏಕದಿನ ಪಂದ್ಯದ ತಂಡದಿಂದ ಕೊಹ್ಲಿ ಹೊರ ಬಿದ್ದಿದ್ದಾರೆ. ಕೊಹ್ಲಿ ತಂಡದಲ್ಲಿದ್ದ ತಮ್ಮ ಹೆಸರನ್ನು ವಾಪಸ್ ಪಡೆದಿದ್ದಾರೆ. ಶರ್ಮಾ ನಾಯಕತ್ವದಲ್ಲಿ ಕೊಹ್ಲಿ ಏಕದಿನ ಪಂದ್ಯ ಆಡಲು ಮನಸ್ಸು ಮಾಡ್ತಿಲ್ವಾ ಎಂಬ ಪ್ರಶ್ನೆ ಎಲ್ಲರನ್ನು ಕಾಡ್ತಿದೆ.
ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಡಿಸೆಂಬರ್ 26 ರಿಂದ ಪ್ರಾರಂಭವಾಗಲಿದೆ. ಅಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಾಗಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಜನವರಿ 19 ರಿಂದ ಮೊದಲ ಏಕದಿನ ಪಂದ್ಯ ನಡೆಯಲಿದೆ. ವರದಿಯ ಪ್ರಕಾರ, ಕೊಹ್ಲಿ ತಮ್ಮ ಮಗಳು ವಾಮಿಕಾ ಅವರ ಮೊದಲ ಹುಟ್ಟುಹಬ್ಬವನ್ನು ಆಚರಿಸುವ ಕಾರಣಕ್ಕೆ ತಂಡದಿಂದ ಹೊರಬಿದ್ದಿದ್ದಾರೆ ಎನ್ನಲಾಗಿದೆ.
ಕಳೆದ ವರ್ಷ ಜನವರಿ 11 ರಂದು ವಾಮಿಕಾ ಜನಿಸಿದ್ದಾಳೆ. ಟೆಸ್ಟ್ ಸರಣಿ ಮುಗಿದ ನಂತರ ಕೊಹ್ಲಿ, ಕುಟುಂಬ ಜೊತೆ ರಜೆಗೆ ತೆರಳಿದ್ದಾರೆ ಎನ್ನಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯ ಜನವರಿ 11 ರಿಂದ ಆರಂಭವಾಗಲಿದ್ದು, ಜನವರಿ 19 ರಿಂದ ಏಕದಿನ ಪಂದ್ಯಗಳು ಆರಂಭವಾಗಲಿವೆ.