ಪ್ರೀತಿಯಲ್ಲಿ ಮೋಸ ಹೋದಾಗ ಆಗುವ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು. ಪ್ರೀತಿಯಲ್ಲಿ ಮೋಸ ಹೋದವರು ತಮ್ಮದೇ ರೀತಿಯಲ್ಲಿ ಸೇಡು ತೀರಿಸಿಕೊಳ್ತಾರೆ. ಕೆಲವರು ಶಾಂತವಾಗಿದ್ದರೆ ಮತ್ತೆ ಕೆಲವರು ಹಿಂಸೆಗೆ ಇಳಿಯುತ್ತಾರೆ. ಆದ್ರೆ ಲಂಡನ್ ನಲ್ಲಿ ವ್ಯಕ್ತಿಯೊಬ್ಬ ಮಾಡಿದ ಕೆಲಸ ಅಚ್ಚರಿ ಹುಟ್ಟಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿ ಈ ವಿಷ್ಯ ಹಂಚಿಕೊಳ್ತಿದ್ದಂತೆ ಜನರು ದಂಗಾಗಿದ್ದಾರೆ.
ಸಾಮಾಜಿಕ ಜಾಲತಾಣ ರೆಡ್ಡಿಟ್ ನಲ್ಲಿ ಪ್ರೀತಿಯ ಜೀವನದ ಬಗ್ಗೆ ಹಂಚಿಕೊಳ್ಳುವಂತೆ ಬಳಕೆದಾರನೊಬ್ಬ ಪೋಸ್ಟ್ ಹಾಕಿದ್ದಾನೆ. ಅದಕ್ಕೆ ಈ ವ್ಯಕ್ತಿ ತನ್ನ ಪ್ರೀತಿ ವಿಷ್ಯ ಹೇಳಿದ್ದಾನೆ. ಪತ್ನಿ ನನಗೆ ಮೋಸ ಮಾಡ್ತಿದ್ದಾಳೆ ಎಂಬುದು ಗೊತ್ತಾಗ್ತಿದ್ದಂತೆ ನಾನು ಮಾಡಿದ ಕೆಲಸ ನಿಮಗೆ ವಿಚಿತ್ರವೆನಿಸಬಹುದು. ಆದರೆ ಸತ್ಯವೆಂದು ಆತ ಹೇಳಿದ್ದಾನೆ.
ಅಷ್ಟಕ್ಕೂ ಆತ ಮಾಡಿದ್ದೇನು ಗೊತ್ತಾ? ಪತ್ನಿಯ ಮೋಸದ ವಿಷ್ಯ ತಿಳಿಯುತ್ತಿದ್ದಂತೆ ಆಕೆಗೆ ಬುದ್ದಿ ಕಲಿಸಲು ಪತ್ನಿ ತಾಯಿಗೆ ಹತ್ತಿರವಾಗಿದ್ದಾನಂತೆ. ಇಬ್ಬರು ಎಷ್ಟು ಹತ್ತಿರವಾಗಿದ್ದಾರೆಂದ್ರೆ ಇಬ್ಬರ ಮಧ್ಯೆ ಅನೇಕ ಬಾರಿ ಶಾರೀರಿಕ ಸಂಬಂಧ ಬೆಳೆದಿದೆಯಂತೆ. ಇದನ್ನು ಕೇಳಿದ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇನ್ನೊಬ್ಬ ವ್ಯಕ್ತಿ ಕೂಡ ತನ್ನ ಜೀವನದಲ್ಲಾದ ಘಟನೆಯೊಂದನ್ನು ಹಂಚಿಕೊಂಡಿದ್ದಾನೆ. ಪ್ರೇಯಸಿ ಜೊತೆ ಆತ ಹಾಟ್ ಟಬ್ ನಲ್ಲಿ ಶಾರೀರಿಕ ಸಂಬಂಧ ಬೆಳೆಸುತ್ತಿದ್ದನಂತೆ. ಈ ವೇಳೆ ಗರ್ಲ್ ಫ್ರೆಂಡ್ ತಾಯಿ ಅಲ್ಲಿಗೆ ಬಂದಿದ್ದಾಳಂತೆ. ತಾಯಿ ಬಂದರೂ ಆತ ಮಾಡ್ತಿದ್ದ ಕೆಲಸವನ್ನು ಮುಂದುವರೆಸಿದ್ದಾನಂತೆ. ತಾಯಿ, ಆತನ ಜೊತೆ ಮಾತು ಮುಂದುವರೆಸಿದ್ದಳಂತೆ.