ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತೇವಾಂಶಭರಿತ ಮೋಡಗಳು ಇದ್ದು, ರಾಜ್ಯದ ದಕ್ಷಿಣ ಒಳನಾಡು ಭಾಗದಲ್ಲಿ ಮುಂದಿನ ಎರಡು ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಹಾಸನ, ಮಂಡ್ಯ ಚಿಕ್ಕಬಳ್ಳಾಪುರ, ಮೈಸೂರು ಜಿಲ್ಲೆಗಳಲ್ಲಿ ಡಿಸೆಂಬರ್ 14, 15 ರಂದು ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಒಳನಾಡು, ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ ಇರುವುದಿಲ್ಲ. ಇನ್ನು ಮೈಸೂರು, ಮಡಿಕೇರಿ ಶಿವಮೊಗ್ಗದಲ್ಲಿ ಕನಿಷ್ಠ ತಾಪಮಾನ 3 -4 ಡಿಗ್ರಿಯಷ್ಟು ಕುಸಿತವಾಗಿದೆ. ಇದರೊಂದಿಗೆ ಕೆಲವು ಜಿಲ್ಲೆಗಳಲ್ಲಿಯೂ ಕನಿಷ್ಠ ತಾಪಮಾನ ಕುಸಿದಿದೆ. ಈ ಜಿಲ್ಲೆಗಳು ಸೇರಿದಂತೆ ಮಂಡ್ಯ, ದಕ್ಷಿಣ ಕನ್ನಡ ಸೇರಿ ಹಲವೆಡೆ ತಾಪಮಾನ ಕುಸಿದು ಚಳಿ ಹೆಚ್ಚಾಗತೊಡಗಿದೆ ಎನ್ನಲಾಗಿದೆ.